ಕಣಿವೆ ನಾಡಿನ ಮೂವರಿಗೆ ಪತ್ರಿಕೋದ್ಯಮದ ಪ್ರತಿಷ್ಠಿತ ‘ಪುಲಿಟ್ಜರ್ ಪ್ರಶಸ್ತಿ’

330

ಜಮ್ಮು ಕಾಶ್ಮೀರ: ಕಣಿವೆ ನಾಡಿನ ಮೂವರು ಫೋಟೋ ಜರ್ನಲಿಸ್ಟ್ ಗಳಿಗೆ ಪತ್ರಿಕೋದ್ಯಮದ ಶ್ರೇಷ್ಠ ಪ್ರಶಸ್ತಿಯಾದ ಪುಲಿಟ್ಜರ್ ಪ್ರಶಸ್ತಿ ಒಲಿದಿದೆ. ಜಮ್ಮು ಕಾಶ್ಮೀರದಲ್ಲಿ 370 ಕಾಯ್ದೆ ರದ್ದು ಆದ್ಮೇಲೆ ಅಲ್ಲಿನ ಜನಜೀವನದ ಕುರಿತು ಅದ್ಭುತ ಚಿತ್ರಗಳನ್ನ ಕ್ಲಿಕ್ ಮಾಡಲಾಗಿದೆ.

ಅಸೋಸಿಯೇಟೆಡ್ ಪ್ರೆಸ್ ನ ಫೋಟೋಗ್ರಾಫರ್ ಆಗಿರುವ ಚನ್ನಿ ಆನಂದ, ದರ್ ಯಾಸೀನ್ ಹಾಗೂ ಮುಖ್ತಾರ್ ಖಾನ್ ಅವರಿಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಒಲಿದಿದೆ. ಕರೋನಾ ಪರಿಸ್ಥಿತಿಯಲ್ಲಿ ಪ್ರಶಸ್ತಿ ಘೋಷಣೆ ಮುಂದೂಡಲಾಗಿತ್ತು. ಇದೀಗ ಪ್ರಶಸ್ತಿ ನೀಡುವ ಸಂಸ್ಥೆಯ ಡಾನಾ ಕೆನಡಿ ಅವರು ತಮ್ಮ ಮನೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಘೋಷಿಸಿದ್ದಾರೆ.

ಪ್ರಶಸ್ತಿ ವಿಜೇತರು

ಚನ್ನಿ ಆನಂದ ಜಮ್ಮುವಿನಲ್ಲಿ, ದರ್ ಯಾಸೀನ್ ಹಾಗೂ ಮುಖ್ತಾರ್ ಖಾನ್ ಶ್ರೀನಗರದಲ್ಲಿ ಕಾರ್ಯನಿರ್ವಹಿಸ್ತಿದ್ದಾರೆ. ಈ ಮೂವರಿಗೆ ಪತ್ರಿಕೋದ್ಯಮ ವಿಭಾಗದ ವಿಶ್ವದ ಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ.

ಪುಲಿಟ್ಜರ್ ಪ್ರಶಸ್ತಿ:

ಅಮೆರಿಕ ಮೂಲದ ಈ ಪ್ರಶಸ್ತಿ ಪತ್ರಿಕೋದ್ಯಮದ ಮಂದಿಗೆ ಅತ್ಯಂತ ಶ್ರೇಷ್ಠವಾಗಿದೆ. ಅಮೆರಿಕ ಮೂಲದ ಪ್ರಶಸ್ತಿ ದಿನ ಪತ್ರಿಕೆ, ಅಂತರ್ಜಾಲ ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಂಗೀತದಲ್ಲಿ ಸಾಧನೆ ಮಾಡಿದವರಿಗೆ ನೀಡುವ ಗೌರವ.

ಸೆಂಟಿ ಲೂಯಿಸ್, ಪೋಸ್ಟ್-ಡಿಸ್ ಪ್ಯಾಚ್ ಪತ್ರಿಕೆಯ ಸಂಸ್ಥಾಪಕ, ಪ್ರಕಾಶಕರಾಗಿದ್ದ ಜೋಸೆಫ್ ಪುಲಿಟ್ಜರ್ ಈ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ಮುಂದೆ ನ್ಯೂಯಾರ್ಕ್ ಗೆ ಬಂದು ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ತನ್ನ ಆಸ್ತಿಯನ್ನ ಬಿಟ್ಟು ಹೋದ. ಅವನ ಆಸ್ತಿಯ ಒಂದು ಭಾಗದಲ್ಲಿ 1912ರಲ್ಲಿ ಪತ್ರಿಕೋದ್ಯಮ ಸ್ಕೂಲ್ ಶುರು ಮಾಡಿದ್ರು. ಮುಂದೆ 1914, ಜೂನ್ 4ರಂದು ಮೊದಲ ಪ್ರಶಸ್ತಿ ನೀಡಲಾಯ್ತು.




Leave a Reply

Your email address will not be published. Required fields are marked *

error: Content is protected !!