ಐಪಿಎಲ್ ಹರಾಜು ಒಂದು ದಿನ ಇರುವಾಗಲೇ ಪ್ರೀತಿಗೆ ಶಾಕ್

453

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಪಿಎಲ್-2022 ಮೇಗಾ ಹರಾಜು ಪ್ರಕ್ರಿಯೆ ನಾಳೆ ಹಾಗೂ ನಾಡಿದ್ದು ನಡೆಯಲಿದೆ. ಹೀಗಾಗಿ ಕ್ರೀಡಾ ಪ್ರೇಮಿಗಳು ಸೇರಿದಂತೆ ಎಲ್ಲರ ಕಣ್ಣು ಹರಾಜು ಮೇಲೆ ನೆಟ್ಟಿದೆ. ಹೀಗಿರುವಾಗ್ಲೇ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾಗೆ ಶಾಕ್ ಕೊಡಲಾಗಿದೆ.

ಯೆಸ್, ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ವಾಸೀಂ ಜಾಫರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಟ್ವೀಟರ್ ಮೂಲಕ ಜಾಫರ್ ರಾಜೀನಾಮೆ ಸಲ್ಲಿಸಿದ್ದು, ಏ ದಿಲ್ ಹೈ ಮುಷ್ಕಿಲ್ ಚಿತ್ರದ ಹಾಡಿನ ಫೋಟೋವೊಂದನ್ನು ಸಹ ಶೇರ್ ಮಾಡಿದ್ದಾರೆ. ಪಂಜಾಬ್ ತಂಡಕ್ಕೆ ಶುಭ ಕೋರಿದ್ದಾರೆ.

ಆಸ್ಟ್ರೇಲಿಯಾದ ಡೇಮಿಯನ್ ರೈಟ್ ಬೌಲಿಂಗ್ ಕೋಚ್, ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ಫೀಲ್ಡಿಂಗ್ ಕೋಚ್ ಆಗಿದ್ದು, ಕರ್ನಾಟಕದ ಅನಿಲ್ ಕುಂಬ್ಳೆ ಮುಖ್ಯಕೋಚ್ ಆಗಿದ್ದಾರೆ. 590 ಆಟಗಾರರು ಐಪಿಎಲ್ ಹರಾಜಿಗೆ ಹೆಸರು ನೋಂದಾಯಿಸಿದ್ದಾರೆ. ಇದರಲ್ಲಿ 228 ಆಟಗಾರರ ಕ್ಯಾಪ್ಡ್, 355 ಆಟಗಾರ ಅನ್ ಕ್ಯಾಪ್ ಆಗಿದ್ದಾರೆ. ಲಖನೌ ಹಾಗೂ ಅಹಮದಾಬಾದ್ ಸೇರಿ ಈ ಬಾರಿ 10 ತಂಡಗಳು ಕಣಕ್ಕೆ ಇಳಿಯಲಿವೆ.




Leave a Reply

Your email address will not be published. Required fields are marked *

error: Content is protected !!