ಪ್ರತಿಭಟನೆ ವರ್ಸಸ್ ಪ್ರತಿಭಟನೆ

338

ಧಾರವಾಡ: ಸರ್ಕಾರಿ ವಕೀಲರೊಬ್ಬರ ಜೊತೆ ಪೊಲೀಸ್ರು ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಸಂಘ ಹಾಗೂ ಪೊಲೀಸರ ಪರ ದಲಿತ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದ್ರು. ವಕೀಲರೊಂದಿಗೆ ಅನುಚಿತವಾಗಿ ವರ್ತಿಸಿದ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರನ್ನ ಕೂಡಲೇ ಬಂಧಿಸುವಂತೆ ಆಗ್ರಹಿಸಿ, ವಕೀಲರ ಸಂಘದವರು ಉಪನಗರ ಠಾಣೆ ಎದುರು ಪ್ರತಿಭಟನೆ ನಡೆಸಿದ್ರು.

ಆರೋಪಿಗಳನ್ನ ಬಂಧಿಸುವ ತನಕ ಹೋರಾಡ್ತೀವಿ ಎಂದು, ಸಂಘದ ಸದಸ್ಯರು ಉಪನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ರು. ಸಂಘದ ಅಧ್ಯಕ್ಷ ಬಿ.ಎಸ್.ಘೋಡ್ಸೆ, ಉಪಾಧ್ಯಕ್ಷ ರಾಜು ಕೋಟಿ, ಕಾರ್ಯದರ್ಶಿ ಎನ್.ಆರ್.ಮಟ್ಟಿ ಸೇರಿದಂತೆ ಅನೇಕರು ಇದ್ದರು.

ಪೊಲೀಸ್ ಇಲಾಖೆಗೆ ನೈತಿಕ ಬೆಂಬಲ:

ಇತ್ತ ಅಮ್ಮಿನಬಾವಿ ಗ್ರಾಮದ ದಲಿತ ಮುಖಂಡರು ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುವ ಮೂಲಕ, ಪೊಲೀಸ್ ಇಲಾಖೆಗೆ ನೈತಿಕ ಬೆಂಬಲ ನೀಡಿದರು. ಜಿಲ್ಲಾ ಸರ್ಕಾರಿ ವಕೀಲರಾದ ಸುನೀಲ ಗುಡಿಯವರನ್ನ ಹುದ್ದೆಯಿಂದ ಕೂಡಲೇ ಅಮಾನತು ಮಾಡಬೇಕು. ಅಮಿನಬಾವಿ ಗ್ರಾಮದಲ್ಲಿ ವಿನಾಃಕಾರಣ ಸಿವಿಲ್ ವ್ಯಾಜ್ಯಗಳಲ್ಲಿ ಮಧ್ಯ ಪ್ರವೇಶಿಸ್ತಾರೆ. ಈ ಮೂಲಕ ಅಧಿಕಾರಿಗಳನ್ನ ಮತ್ತು ಸಿಬ್ಬಂದಿಯನ್ನ ಹೆದರಿಸುವ ಕೆಲಸ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳು ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು. ಚಂದ್ರು ಹುಲೇನ್ನವರ, ಮಂಜುನಾಥ, ಅಶೋಕ ದೊಡಮನಿ, ಕೃಷ್ಣಾ ಮಾದರ, ಚಂದ್ರು, ಎಂ.ಡಿ.ನಾಗಮ್ಮನವರ, ಸುನೀಲ ಹರಿಜನ, ಸಿದ್ದಪ್ಪ ಮುಖಾಸಿ, ಸುರೇಶ ದೊಡಮನಿ, ಶ್ರೀನಿವಾಸ, ಫಕ್ಕೀರಪ್ಪ ಸೇರಿದಂತೆ ಅನೇಕರು ಇದ್ದರು.




Leave a Reply

Your email address will not be published. Required fields are marked *

error: Content is protected !!