ಲಸಿಕೆ ಕುರಿತು ಸಂಪೂರ್ಣ ಮಾಹಿತಿ ಕೇಳಿದ ಸುಪ್ರೀಂ ಕೋರ್ಟ್

210

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೋವಿಶಿಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ ವಿ ಲಸಿಕೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಖರೀದಿಸಿದ ಕುರಿತು ಮಾಹಿತಿ ಕೊಡಿ ಎಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಕೇಳಿದೆ. ಖರೀದಿಯ ಅಂಕಿಅಂಶಗಳ ಪೂರ್ಣ ಪ್ರಮಾಣದ ಪ್ರಮಾಣ ಪತ್ರ ನೀಡಿ ಆದೇಶಿಸಿದೆ.

ಸಂಗ್ರಹ ಮಾಡಿರುವ ಲಸಿಕೆಗಳ ದಿನಾಂಕ, ಸಂಗ್ರಹಕ್ಕೆ ಆದೇಶ ನೀಡಿದ ದಿನಾಂಕ, ಶೇಕಡಾವಾರು ಜನರಿಗೆ ನೀಡಿರುವ ಲಸಿಕೆ, ಲಸಿಕೆಗಳ ಪ್ರಮಾಣ ಸಹಿತಿ ಎರಡು ವಾರಗಳಲ್ಲಿ ಮಾಹಿತಿ ನೀಡುವಂತೆ ಆದೇಶಿಸಲಾಗಿದೆ. ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ, ಎಲ್ ನಾಗೇಶ್ವರ ರಾವ್, ಎಸ್.ರವೀಂದ್ರ ಭಟ್ ಅವರಿದ್ದ ವಿಭಾಗೀಯ ಪೀಠ ಸ್ವಯಂ ಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡು ಆದೇಶಿಸಿದೆ.




Leave a Reply

Your email address will not be published. Required fields are marked *

error: Content is protected !!