5ನೇ ರ್ಯಾಂಕ್ ಪಡೆದ ಹುಬ್ಬಳ್ಳಿ ವಿದ್ಯಾರ್ಥಿನಿ

331

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ಉತ್ತಮ ಅಂಕಗಳಿಸಿರುವ ನಗರದ ಕೆಎಲ್‌ಇ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿನಿ, ರಾಜ್ಯಕ್ಕೆ 5ನೇ ರ್ಯಾಂಕ್ ಬಂದಿದ್ದಾಳೆ. ಜೈನಾ ಶ್ರೀಪಾಲ್ ಷಾ ಅನ್ನೋ ವಿದ್ಯಾರ್ಥಿನಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದು ಈ ಸಾಧನೆ ಮಾಡಿದ್ದಾಳೆ.

ವಿದ್ಯಾನಗರ ಕೆಎಲ್‌ಇ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಜೈನಾ, ಅಕೌಂಟನ್ಸಿ-100, ಅರ್ಥಶಾಸ್ತç-100, ಬ್ಯುಸಿನೆಸ್ ಸ್ಟಡಿ-100, ಸ್ಟಾಟಸ್ಟಿಕ್ಸ್-100, ಇಂಗ್ಲಿಷ್-96 ಹಾಗೂ ಹಿಂದಿ-97 ಅಂಕ ಸೇರಿದಂತೆ ಒಟ್ಟು 593 ಅಂಕ ಪಡೆದು, ಶೇ.98.8ರಷ್ಟು ಸಾಧನೆ ಮಾಡಿದ್ದಾಳೆ.

ಮೂಲತಃ ಗೋಕಾಕ ನಿವಾಸಿಯಾದ ಜೈನಾ, ಇವರ ತಂದೆ ವ್ಯಾಪಾರಿಯಾಗಿದ್ದಾರೆ. ತಾಯಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಮೊದಲಿನಿಂದಲೂ ಓದಿನಲ್ಲಿ ಮುಂದೆಯಿರುವ ವಿದ್ಯಾರ್ಥಿನಿ ಜೈನಾಳ ಸಾಧನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಾಜ್ಯಕ್ಕೆ 5ನೇ ರ್ಯಾಂಕ್ ಬಂದಿರುವುದು ಖುಷಿಯಾಗಿದೆ ಎಂದು ಹೇಳಿದ್ದಾಳೆ.




Leave a Reply

Your email address will not be published. Required fields are marked *

error: Content is protected !!