‘ನೀನೆ ರಾಜಕುಮಾರ’ ಪುಸ್ತಕ ಬಿಡುಗಡೆ ಮಾಡಿದ ಕಿಚ್ಚ

556

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕುರಿತ ‘ನೀನೆ ರಾಜಕುಮಾರ’ ಅನ್ನೋ ಪುಸ್ತಕವನ್ನು ನಟ ಕಿಚ್ಚ ಸದೀಪ್ ಬಿಡುಗಡೆ ಮಾಡಿದರು. ಪತ್ರಕರ್ತ ಡಾ.ಶರಣು ಹಲ್ಲೂರ ಈ ಕೃತಿಯನ್ನು ಬರೆದಿದ್ದಾರೆ. 260ಕ್ಕೂ ಹೆಚ್ಚು ಪುಟಗಳ ಪುಸ್ತಕವಾಗಿದೆ.

ಈ ಬಗ್ಗೆ ಮಾತನಾಡಿದ ನಟ ಸುದೀಪ, ಒಂದೊಳ್ಳೆ ಕೃತಿಯ ಮೂಲಕ ಶರಣು ಹಲ್ಲೂರ ಪುನೀತ್ ಗೆ ನಮನ ಸಲ್ಲಿಸಿದ್ದಾರೆ. ಇದರಲ್ಲಿ ಅವರ ಜೀವನವನ್ನು ಸೊಗಸಾಗಿ ಹಿಡಿದಿಡಲಾಗಿದೆ. ನಾನು ಯಾವತ್ತಿಗೂ ಪುನೀತ್ ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದರು.

ಎರಡು ವರ್ಷಗಳ ಹಿಂದೆ ಪುನೀತ್ ಈ ಕೃತಿಯನ್ನು ಬಿಡುಗಡೆ ಮಾಡಿದ್ದರು. ಇಂದು ಸುದೀಪ್ 2ನೇ ಮುದ್ರಣದ ಕೃತಿ ಬಿಡುಗಡೆಗೊಳಿಸಿದರು. ಈ ವೇಳೆ ನಿರ್ಮಾಪಕ ಜಾಕ್ ಮಂಜು, ಸಾವಣ್ಣ ಪ್ರಕಾಶನದ ಜಮೀಲ್, ಲೇಖಕ ಶರಣು ಹಲ್ಲೂರ, ಕುಮಾರ್ ಸೇರಿ ಅನೇಕರಿದ್ದರು.




Leave a Reply

Your email address will not be published. Required fields are marked *

error: Content is protected !!