ಪ್ರಜಾಸ್ತ್ರ ಇಂಪ್ಯಾಕ್ಟ್: ನೋಟಿಸ್ ಬೋರ್ಡಿನಲ್ಲಿ ಟೆಂಡರ್ ಮಾಹಿತಿ

202

ಪ್ರಜಾಸ್ತ್ರ ಸುದ್ದಿ

ಧಾರವಾಡ: ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ನೋಟಿಸ್ ಬೋರ್ಡ್ ನಲ್ಲಿ ಅಂಟಿಸದೆ ಇರುವುದು ಹಾಗೂ ಅಲ್ಲಿನ ಕೆಲ ಅಧಿಕಾರಿಗಳು ಗೋಲ್ಮಾಲ್ ನಡೆಸುತ್ತಿರುವ ಆರೋಪದ ಬಗ್ಗೆ ‘ಪ್ರಜಾಸ್ತ್ರ’ ಈ ಹಿಂದೆ ಸುದ್ದಿ ಮಾಡಿತ್ತು. ಅಲ್ದೇ, ಈ ಬಗ್ಗೆ ಮಹಾನಾಯಕ ಡಾ.ಬಿ.ಆರ್ ಅಂಬೇಡ್ಕರ್ ದಲಿತ ಗುತ್ತಿಗೆದಾರರ ಸಂಘದಿಂದ ಮನವಿ ಸಹ ಸಲ್ಲಿಸಿದ್ದರು.

ಇದೀಗ ಕಾಮಗಾರಿಗೆ ಸಂಬಂಧಿಸಿದ ಟೆಂಡರ್ ಮಾಹಿತಿಯನ್ನು ನೋಟಿಸ್ ಬೋರ್ಡ್ ನಲ್ಲಿ ಅಂಟಿಸಲಾಗಿದೆ. ಪ್ರಜಾಸ್ತ್ರ ಸುದ್ದಿಯಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಕಾಮಗಾರಿಯ ಮಾಹಿತಿಯನ್ನು ಸಾರ್ವಜನಿಕರಿಗೆ ಕಾಣಿಸುವಂತೆ ನೋಟಿಸ್ ಬೋರ್ಡ್ ನಲ್ಲಿ ಅಂಟಿಸಿರುವುದು ಇಂಪ್ಯಾಕ್ಟ್ ಆಗಿದೆ.

”ಟೆಂಡರ್ ಮಾಹಿತಿಯನ್ನು ನೋಟಿಸ್ ಬೋರ್ಡಿಗೆ ಅಂಟಿಸಬೇಕೆಂದು ನಾವು ಈ ಹಿಂದೆ ಮನವಿ ಸಲ್ಲಿಸಿದ್ದೇವೆ. ಎರಡು ವರ್ಷಗಳ ನಂತರ ನೋಟಿಸ್ ಬೋರ್ಡಿಗೆ ಅಂಟಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಜಾಸ್ತ್ರ ವೆಬ್ ಪತ್ರಿಕೆಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಇದೆ ರೀತಿ ಧಾರವಾಡ ಜಿಲ್ಲೆಯ ಎಲ್ಲ ತಾಲೂಕಿನ ಟೆಂಡರ್ ಗಳನ್ನು ನೋಟಿಸ್ ಬೋರ್ಡಿಗೆ ಅಂಟಿಸಬೇಕು ಎಂದು ಅಧಿಕಾರಿಗಳಲ್ಲಿ ಕೇಳಿಕೊಳ್ಳುತ್ತೇವೆ.”

ಫಕೀರಪ್ಪ ಏಳಗುಡ್ಡ, ಅಧ್ಯಕ್ಷರು, ಮಹಾನಾಯಕ ಡಾ.ಬಿ.ಆರ್ ಅಂಬೇಡ್ಕರ್ ದಲಿತ ಗುತ್ತಿಗೆದಾರರ ಸಂಘ

ಪ್ರಜಾಸ್ತ್ರ ವೆಬ್ ಪತ್ರಿಕೆ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಅಕ್ರಮಗಳ ಕುರಿತು ಸಾಕಷ್ಟು ಸುದ್ದಿಗಳನ್ನು ಮಾಡಿದೆ. ದಾಖಲೆ ಸಮೇತ ವರದಿಗಳನ್ನು ಮಾಡಿದ್ದು, ಅಲ್ಲಿನ ವ್ಯವಸ್ಥೆ ಬದಲಾವಣೆಗೆ ಕಾರಣವಾಗಿದೆ. ಅನ್ಯಾಯ, ಅಕ್ರಮದ ವಿಚಾರವನ್ನು ಜನರ ಎದುರಿಗೆ ತೆರೆದಿಡುವ ಕೆಲಸ ಸದಾ ಮಾಡುತ್ತೆ. ಇದಕ್ಕೆ ನಿಮ್ಮ ಬೆಂಬಲವೂ ಕಾರಣವಾಗಿದೆ.




Leave a Reply

Your email address will not be published. Required fields are marked *

error: Content is protected !!