ಇಂದು ರಫೇಲ್ ಯುದ್ಧವಿಮಾನ ಹಸ್ತಾಂತರ

385

ನವದೆಹಲಿ: ಮೂರು ದಿನಗಳ ಫ್ರಾನ್ಸ್ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್, ಇಂದು ರಫೇಲ್ ಯುದ್ಧವಿಮಾನ ಹಸ್ತಾಂತರ ಮಾಡಿಕೊಳ್ಳಲಿದ್ದಾರೆ. ಇಲ್ಲಿ ಇನ್ನೊಂದು ವಿಶೇಷವಿದೆ. ಅದೇನಂದ್ರೆ, ಭಾರತೀಯ ವಾಯುಪಡೆಯ ಸಂಸ್ಥಾಪನ ದಿನ ಹಾಗೂ ವಿಜಯದಶಮಿ ದಿನವಾದ ಇಂದು, ಪೂಜೆ ಸಲ್ಲಿಸಿ ವಿಮಾನ ಹಸ್ತಾಂತರ ಮಾಡಿಕೊಳ್ಳಲಿದ್ದಾರೆ.

ಯುದ್ಧವಿಮಾನ ಹಸ್ತಾಂತರದ ಬಳಿಕ ರಕ್ಷಣಾ ಸಚಿವರು ಕಾಕ್ ಪೀಟ್ ನಲ್ಲಿ ಕುಳಿತು ಮೊದ್ಲ ಹಾರಾಟ ನಡೆಸಲಿದ್ದಾರೆ. ಭಾರತ ಒಟ್ಟು 36 ಯುದ್ಧವಿಮಾನಗಳನ್ನ ಖರೀದಿಸ್ತಿದೆ. ಅದರಲ್ಲಿ ಒಂದನ್ನ ಇಂದು ಹಸ್ತಾಂತರಿಸ್ತಿದೆ. ಮೊದಲ ಹಂತದ ನಾಲ್ಕು ವಿಮಾನಗಳು ಮೇ, 2020ಕ್ಕೆ ಭಾರತಕ್ಕೆ ಬರಲಿವೆ ಎಂದು ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!