ವಿಶ್ವವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ

327

ಮೈಸೂರು: ಇಂದು ನವರಾತ್ರಿ ಹಬ್ಬದ ಕೊನೆಯ ದಿನ. ವಿಜಯದಶಮಿಯನ್ನ ನಾಡಿನ ತುಂಬೆಲ್ಲ ಸಂಭ್ರಮದಿಂದ ಆಚರಣೆ ಮಾಡಲಾಗ್ತಿದೆ. 9 ದಿನಗಳ ಕಾಲ ನವದುರ್ಗಿಯರನ್ನ ಪೂಜಿಸಿ ಇಂದು ಮಂಗಳ ಹಾಡಲಾಗುತ್ತೆ. ಅದರಲ್ಲೂ ದಸರಾ ಅಂದ್ರೆ ಮೈಸೂರು ಜಂಬೂ ಸವಾರಿ ಕಣ್ಮುಂದೆ ಬರುತ್ತೆ.

ದೇಶ, ವಿದೇಶಗಳಿಂದ ಮೈಸೂರಿಗೆ ಹರಿದು ಬಂದಿರುವ ಲಕ್ಷಾಂತರ ಜನರು ಕಣ್ತುಂಬಿಕೊಳ್ಳಲು ಬಯಸುವ ಜಂಬೂ ಸವಾರಿ ಇಂದು ಮಧ್ಯಾಹ್ನ 2.15 ರಿಂದ 2.58ರ ನಡುವಿನ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ, ವಿಜಯದಶಮಿ ಮೆರವಣಿಗೆಗೆ ಚಾಲನೆ ಸಿಗಲಿದೆ.

ಸಿಎಂ ಬಿ.ಎಸ್ ಯಡಿಯೂರಪ್ಪನವರು ಸಂಜೆ 4.31 ರಿಂದ 4.57ರ ಒಳಗೆ ಶುಭ ಕುಂಭ ಲಗ್ನದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಇದನ್ನ ಕುಳಿತುಕೊಂಡು ನೋಡಲು 26 ಸಾವಿರ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಮೆರವಣಿಗೆಯಲ್ಲಿ 39 ಸ್ತಬ್ಧ ಚಿತ್ರಗಳು, 100ಕ್ಕೂ ಹೆಚ್ಚು ಕಲಾತಂಡಗಳು, ಗಜಪಡೆ, ಅಶ್ವಪಡೆ, ವಿವಿಧ ಪೊಲೀಸ್ ಪಡೆಗಳು ಸೇರಿದಂತೆ ಕಲಾಮೆರಗು ತುಂಬಿಕೊಂಡಿರಲಿದೆ.




Leave a Reply

Your email address will not be published. Required fields are marked *

error: Content is protected !!