ಯುವರತ್ನ ಟೀಸರ್ ಗೆ ಅಪ್ಪು ಫ್ಯಾನ್ಸ್ ಬೋಲ್ಡ್

357

ಪವರ್ ಸ್ಟಾರ್ ನಟ ಪುನೀತರಾಜಕುಮಾರ ಅಭಿನಯದ ಯುವರತ್ನ ಚಿತ್ರದ ಟೀಸರ್ ನಿನ್ನೆ ಸಂಜೆ ರಿಲೀಸ್ ಆಗಿದೆ. ಇದನ್ನ ನೋಡಿದ ಅವರ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ. ಸಂತೋಷ ಆನಂದರಾಮ ನಿರ್ದೇಶನದ ಚಿತ್ರದ ಮೊದಲ ಟೀಸರ್ ಸೂಪರ್ ಆಗಿದೆ ಅಂತಿದ್ದಾರೆ. ಅಪ್ಪು ಅಭಿಮಾನಿಗಳಿಗೆ ಕಿಕ್ ಕೊಡುವ ದೃಶ್ಯಗಳು ಚಿತ್ರದಲ್ಲಿವೆ ಅನ್ನೋದು ಟೀಸರ್ ಮೂಲಕ ತೋರಿಸಲಾಗಿದೆ.

ಟೀಸರ್ ನಲ್ಲಿ ರಗ್ಬಿ ಆಟವನ್ನ ಜಬರ್ದಸ್ತ್ ಆಗಿ ತೋರಿಸಲಾಗಿದ್ದು, ಪಂಚಿಂಗ್ ಡೈಲಾಗ್ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿದೆ. ಈಗಾಗ್ಲೇ 8 ಲಕ್ಷಕ್ಕೂ ಹೆಚ್ಚು ಜನ ಯುವರತ್ನ ಟೀಸರ್ ನೋಡಿದ್ದಾರೆ. ರಾಜಕುಮಾರ ಅನ್ನೋ ಯಶಸ್ವಿ ಸಿನ್ಮಾ ನೀಡಿದ ಜೋಡಿ ಇದೀಗ ಮತ್ತೊಂದು ಸಕ್ಸಸ್ ನೀಡಲು ರೆಡಿಯಾಗಿದೆ.

ಕಾಲೇಜು ಕಥಾಹಂದರವನ್ನ ಹೊಂದಿರುವ ಸಿನ್ಮಾ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ. ಅಪ್ಪು, ಅಭಿ ಚಿತ್ರಗಳಲ್ಲಿ ಪುನೀತರಾಜಕುಮಾರ ಕಾಲೇಜು ಹುಡ್ಗನ ಗೆಟಪ್ ನಲ್ಲಿ ಮಿಂಚಿದ್ರು. ಎರಡೂ ಚಿತ್ರಗಳು ಸೂಪರ್ ಹಿಟ್ ಆಗಿದ್ವು. ಇದೀಗ ಅಪ್ಪು ಕಾಲೇಜು ಹುಡ್ಗನ ಪಾತ್ರದಲ್ಲಿ ಮತ್ತೆ ಕಾಣಿಸಿಕೊಳ್ತಿದ್ದು ಸಹಜವಾಗಿಯೇ ಅವರ ಫ್ಯಾನ್ಸ್ ಗೆ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!