ರಫೇಲ್ ಜೆಟ್ ಗೆ ವಿಜಯಪುರ ಸೈನಿಕ ಶಾಲೆ ವಿದ್ಯಾರ್ಥಿ ಪೈಲೆಟ್

302

ಪ್ರಜಾಸ್ತ್ರ ವಿಶೇಷ ಸುದ್ದಿ

ವಿಜಯಪುರ: ಇಂದು ಭಾರತಕ್ಕೆ ಬಂದು ಲ್ಯಾಂಡ್ ಆಗಿರುವ ಫ್ರಾನ್ಸ್ ನಿರ್ಮಿತ ರಫೇಲ್ ಜೆಟ್ ಗೆ ಜಿಲ್ಲೆಯ ಸೈನಿಕ ಶಾಲೆಯ ವಿದ್ಯಾರ್ಥಿಯೊಬ್ಬರು ಪೈಲಟ್ ಆಗಿದ್ದಾರೆ. ಈ ಮೂಲಕ ರಾಜ್ಯಕ್ಕೆ, ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.

ಏರ್ ಪೋರ್ಸ್ ನಲ್ಲಿ ವಿಂಗ್ ಕಮಾಂಡರ್ ಆಗಿರುವ 35 ವರ್ಷದ ಅರುಣಕುಮಾರ ಅವರು, ರಫೇಲ್ ಫೈಟರ್ ಜೆಟ್ ಗೆ ಪೈಲೆಟ್ ಆಗಿ ಆಯ್ಕೆಯಾಗಿದ್ದಾರೆ. ಇವರು ವಿಜಯಪುರದಲ್ಲಿರುವ ಸೈನಿಕ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ.

1995-2005ರ ನಡುವಿನ ವಿದ್ಯಾರ್ಥಿಯಾಗಿದ್ದು, ನೋಂದಣಿ ಸಂಖ್ಯೆ 2877 ಆಗಿದೆ. ಇವರು 2007ರಲ್ಲಿ ನ್ಯಾಷನಲ್ ಡಿಫೆನ್ಸ್ ಆರ್ಮ್ ಗೆ ಸೇರ್ಪಡೆಯಾಗಿದ್ದಾರೆ. ಇವರ ತಂದೆ ಎನ್ ಪ್ರಸಾದ ಅವರು ಕೂಡ ಏರ್ ಪೋರ್ಸ್ ನಲ್ಲಿ ವಾರೆಂಟ್ ಆಫೀಸರ್ ಆಗಿದ್ದಾರೆ. ಅರುಣಕುಮಾರ ಅವರ ಸಾಧನೆಗೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ವಿವಿಧ ರಾಜ್ಯಗಳಿಂದ ನಾಲ್ವರು ಆಯ್ಕೆಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!