7 ವರ್ಷಗಳ ಬಳಿಕ ಪಂಚಲಿಂಗ ದರ್ಶನ

364

ಪ್ರಜಾಸ್ತ್ರ ಸುದ್ದಿ

ಮೈಸೂರು: ಟಿ.ನರಸೀಪುರ ತಾಲೂಕಿನ ತಲಕಾಡಿನಲ್ಲಿರುವ ಪಂಚಲಿಂಗ ದರ್ಶನವನ್ನ ಇಂದಿನಿಂದ 10 ದಿನಗಳ ಕಾಲ ನಡೆಯಲಿದೆ. ಸುಮಾರು 7 ವರ್ಷಗಳ ಬಳಿಕ ಐತಿಹಾಸಿಕ ಪಂಚಲಿಂಗ ದರ್ಶನ ಸಿಗುತ್ತಿದೆ. ಒಂದು ದಿನಕ್ಕೆ ಸಾವಿರ ಜನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಮರುಳೇಶ್ವರ, ಪಾತಾಳೇಶ್ವರ, ವೈದ್ಯನಾಥೇಶ್ವರ, ಮಲ್ಲಿಕಾರ್ಜುನೇಶ್ವರ ಹಾಗೂ ಅರ್ಕೇಶ್ವರ ಅನ್ನೋ ಐದು ದೇವಾಲಯಗಳಿದ್ದು ಇದೆವೇ ಪಂಚಲಿಂಗ ಸ್ಥಳವಾಗಿದೆ. ಗುರುವಾರ ಸಂಜೆ 6.30ಕ್ಕೆ ಪೂಜೆ ಸಲ್ಲಿಸಿದ ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತೆ.

5 ಕಾರ್ತಿಕ ಸೋಮವಾರ ಯಾವಾಗ ಬರುತ್ತೋ ಆಗ ಪಂಚಲಿಂಗ ದರ್ಶನ ನಡೆಯುತ್ತಿದೆ. ಕಳೆದ 2013ರಲ್ಲಿ 5 ಕಾರ್ತಿಕ ಸೋಮವಾರ ಬಂದಿದ್ವು. ಇದೀಗ ಮತ್ತೆ 5 ಕಾರ್ತಿಕ ಸೋಮವಾರ ಬಂದಿದ್ದು, 10 ದಿನಗಳ ಕಾಲ ದರ್ಶನವಿರಲಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಸರಳ ಆಚರಣೆ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!