ಈ ವರ್ಷ ಕರ್ತವ್ಯದ ವೇಳೆ ಜೀವ ಕಳೆದುಕೊಂಡ ಪತ್ರಕರ್ತರೆಷ್ಟು?

287

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಹೇಗ್: ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟದ ವರದಿ ಪ್ರಕಾರ ವಿಶ್ವದಲ್ಲಿ ಈ ವರ್ಷ 42 ಜನ ಪತ್ರಕರ್ತರು ತಮ್ಮ ವೃತ್ತಿಗಾಗಿ ಜೀವ ಕಳೆದುಕೊಂಡಿದ್ದಾರೆ. 235 ಜನ ಪತ್ರಕರ್ತರು ಸೆರೆಮನೆ ವಾಸ ಅನುಭವಿಸ್ತಿದ್ದಾರೆ ಎಂದು ತಿಳಿದು ಬಂದಿದೆ.

ಜಾಗತಿಕ ಪತ್ರಕರ್ತರ ಸಂಗ ಕಳೆದ 3 ದಶಕಗಳಿಂದ ಪತ್ರಕರ್ತರಿಗೆ ಸಂಬಂಧಿಸಿದ ಡೇಟಾ ಬಿಡುಗಡೆ ಮಾಡಿಕೊಂಡು ಬರ್ತಿದೆ. ಗುರುವಾರ ವಿಶ್ವ ಮಾನವ ಹಕ್ಕುಗಳ ದಿನವಾಗಿದ್ದು, ಈ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡವರ ಲಿಸ್ಟ್ ರಿಲೀಸ್ ಮಾಡ್ತಿದೆ. ಕಳೆದ 30 ವರ್ಷಗಳಲ್ಲಿ 2,658 ಜನ ಪತ್ರಕರ್ತರು ಪ್ರಾಣವನ್ನ ಅರ್ಪಿಸಿದ್ದಾರೆ.

ಇಂದಿಗೂ ಸಹ ಅಫಘಾನಿಸ್ತಾನ್ ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿ ದೇಶವಾಗಿದೆ. 2018-19ರ ರಿಪೋರ್ಟ್ ನೋಡಿದ್ರೆ ಅಫಘಾನಿಸ್ತಾನ್ 16, ಮೆಕ್ಸಿಕೋ 11, ಸಿರಿಯಾ 8, ಯಮನ್ 8, ಭಾರತ 7 ಹಾಗೂ ಅಮೆರಿಕದಲ್ಲಿ 5 ಜನ ಪ್ರಾಣ ಕಳೆದುಕೊಂಡಿದ್ದಾರೆ. ಟರ್ಕಿ 68, ಚೀನಾ 47 ಹಾಗೂ ಈಜಿಪ್ಟ್ ನಲ್ಲಿ 25 ಜನ ಪತ್ರಕರ್ತರು ಜೈಲು ಶಿಕ್ಷೆ ಅನುಭವಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!