ರಾಮ ಜನ್ಮಭೂಮಿ ಟ್ರಸ್ಟ್ ರಚನೆ: ಪ್ರಧಾನಿ

342

ನವದೆಹಲಿ: ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ರಾಮ ಜನ್ಮಭೂಮಿ ಟ್ರಸ್ಟ್ ಸ್ಥಾಪನೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರದ ಅಭಿವೃದ್ಧಿಗಾಗಿ ನಾವೊಂದು ಯೋಜನೆ ರೆಡಿ ಮಾಡಿದ್ದೇವೆ ಅಂತಾ ಲೋಕಸಭೆಯಲ್ಲಿ ತಿಳಿಸಿದ್ರು.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಎಂಬ ಟ್ರಸ್ಟ್ ರಚಿಸಲಾಗಿದೆ. ಇದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಅಂತಾ ಹೇಳಿದ್ರು. ಕೋಟ್ಯಾಂತರ ಜನರ ಭಾವನೆಯ ವಿಷಯವನ್ನ ನಾನು ಹೇಳ್ತಿರುವುದಕ್ಕೆ ನನ್ಗೆ ಸಿಕ್ಕಿರುವ ಭಾಗ್ಯವೆಂದು ಹೇಳಿದ್ರು. ಮುಂದುವರೆದ ಮಾತ್ನಾಡಿದ ಅವರು, 67.703 ಎಕರೆ ಜಮೀನನ್ನ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ ಬಿಟ್ಟುಕೊಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಅಂತಾ ತಿಳಿಸಿದ್ರು.

ಅಯೋಧ್ಯೆಯಲ್ಲಿ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನವೆಂಬರ್9, 2019ರಂದು ತೀರ್ಪು ನೀಡಿದೆ. ಈ ಜಾಗವನ್ನ ರಾಮಲಲ್ಲಾಗೆ ನೀಡುವಂತೆ ಆದೇಶಿಸಿದೆ. ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕವಾಗಿ 5 ಎಕರೆ ಜಾಗವನ್ನ ನೀಡುವಂತೆ ಸೂಚಿಸಿದೆ.




Leave a Reply

Your email address will not be published. Required fields are marked *

error: Content is protected !!