ದೇಶದಲ್ಲಿ ದಿನಕ್ಕೆ 87 ಅತ್ಯಾಚಾರ: ಏನು ಹೇಳುತ್ತೆ ಈ ವರದಿ?

380

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ದೇಶದಲ್ಲಿ ದಿನ ಕಳೆದಂತೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಪೊಲೀಸ್ ವ್ಯವಸ್ಥೆ, ಕಾನೂನು ಎಷ್ಟೆಲ್ಲ ಕಠಿಣವಾಗಿದ್ರೂ, ಪ್ರತಿ ನಿತ್ಯ ದೇಶದಲ್ಲಿ ಸರಿಸುಮಾರು 87 ಅತ್ಯಾಚಾರ ಪ್ರಕರಣಗಳು ನಡೆಯುತ್ತವೆ. ಈ ಬಗ್ಗೆ ನ್ಯಾಷನಲ್ ಕ್ರೈಂ ರೆಕಾರ್ಡಸ್ ಬ್ಯೂರೋ ಮಾಹಿತಿ ನೀಡಿದೆ.

2018ಕ್ಕೆ ಹೋಲಿಸಿದ್ರೆ 2019ರಲ್ಲಿ ಇದರ ಪ್ರಮಾಣ 7ರಷ್ಟು ಹೆಚ್ಚಾಗಿದೆಯಂತೆ. 2019ರಲ್ಲಿ ಬರೋಬ್ಬರಿ 4,05,861 ಅತ್ಯಾಚಾರ ಪ್ರಕರಣಗಳು ಈ ದೇಶದಲ್ಲಿ ಪತ್ತೆಯಾಗಿವೆ. ಹೀಗಾಗಿ 2018ರಲ್ಲಿ ಶೇಕಡ 58.8ರಷ್ಟಿದ್ದ ಇದರ ಪ್ರಮಾಣ 2019ರಲ್ಲಿ 62.4ಕ್ಕೆ ಏರಿಕೆಯಾಗಿರುವುದು ನಿಜಕ್ಕೂ ಆತಂಕದ ಸಂಗತಿ.

2017ರಲ್ಲಿ 32, 559 ಪ್ರಕರಣಗಳು ದಾಖಲಾದ್ರೆ 2018ರಲ್ಲಿ 3,78,236 ಪ್ರಕರಣಗಳು ದಾಖಲಾಗಿವೆ. ಇನ್ನು 2019ರಲ್ಲಿ ಮಕ್ಕಳ ಮೇಲಿನ ಪ್ರಕರಣ ನೋಡಿದ್ರೆ, ಶೇಕಡ 35.3 ರಷ್ಟು ಲೈಂಗಿಕ ಕೇಸ್ ಹಾಗೂ ಶೇಕಡ 46.6 ಅಪಹರಣ ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಅಂಕಿಅಂಶಗಳನ್ನ ನೋಡಿದ್ರೆ ಹೆಣ್ಣನ್ನ ಪೂಜಿಸುವ ಭಾರತ ಯಾವ ಕಡೆ ಸಾಗ್ತಿದೆ ಅನ್ನೋದನ್ನ ನೋಡಿದ್ರೆ ಭಯವಾಗುತ್ತೆ.




Leave a Reply

Your email address will not be published. Required fields are marked *

error: Content is protected !!