ವೀರ ಕಲಿಗಳಿಗೆ ಮೊದಲ ಪ್ರಜೆಯ ನಮನ

374

ನವದೆಹಲಿ: ಕಾರ್ಗಿಲ್ ವಿಜಯೋತ್ಸವಕ್ಕೆ ಇಂದು 20 ವರ್ಷ ತುಂಬಿದೆ. ದೇಶದ ಹೆಮ್ಮೆಯ ದಿನದ ಬಗ್ಗೆ ಮಾತ್ನಾಡಿರುವ ದೇಶದ ಮೊದಲ ಪ್ರಜೆ ರಾಮನಾಥ ಕೋವಿಂದ ಅವರು, ಸೈನಿಕರ ತ್ಯಾಗ ಬಲಿದಾನದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಟ್ವೀಟರ್ ನಲ್ಲಿ ಈ ಕುರಿತು ಬರೆದಿರುವ ರಾಷ್ಟ್ರಪತಿ ಅವರು, ಹುತಾತ್ಮ ಯೋಧರಿಗೆ ನಮನಗಳನ್ನ ಸಲ್ಲಿಸಿದ್ದಾರೆ.

ಇಂದು ದೇಶದಾದ್ಯಂತ ಕಾರ್ಗಿಲ್ ವಿಜಯೋತ್ಸವವನ್ನ ಆಚರಿಸಲಾಗ್ತಿದೆ. ವೀರ ಕಲಿಗಳ ತ್ಯಾಗ ಬಲಿದಾನವನ್ನ ಸ್ಮರಿಸುವ ಹಾಗೂ ಅಭಿನಂದನೆ ಸಲ್ಲಿಸಲು ಎರಡು ದಿನಗಳ ಕಾಲ ದೇಶದಲ್ಲಿ ವಿಜಯೋತ್ಸವ ಆಚರಿಸಲಾಗ್ತಿದೆ. 20 ವರ್ಷಗಳ ಹಿಂದೆ ಭಾರತವು ಪಾಕ್ ವಿರುದ್ಧ ಕಾರ್ಗಿಲ್ ಯುದ್ಧದಲ್ಲಿ ವಿಜಯ ಸಾಧಿಸಿತು. ಹೀಗಾಗಿ ಜುಲೈ 26ರಂದು ‘ಕಾರ್ಗಿಲ್ ವಿಜಯ್ ದಿವಸ್’ ಆಚರಿಸಿಕೊಂಡು ಬರಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!