ಕಾರ್ಗಿಲ್ ವಿಜಯೋತ್ಸವ: ಹುತಾತ್ಮ ಯೋಧರಿಗೆ ಗೌರವ

293

ಪ್ರಜಾಸ್ತ್ರ ಸುದ್ದಿ

ನವದೆಹಲಿ: 21ನೇ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಇಂದು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಯ್ತು. ರಕ್ಷಣಾ ಸಚಿವ ರಾಜನಾಥ ಸಿಂಗ್ ನ್ಯಾಷನಲ್ ವಾರ್ ಮೆಮೋರಿಯಲ್ ಗೆ ತೆರಳಿ, ಅಮರ್ ಜ್ಯೋತಿ ಜವಾನ್ ನಲ್ಲಿ ಗೌರವ ನಮನ ಸಲ್ಲಿಸಿದ್ರು.

1999ರಲ್ಲಿ ಪಾಕಿಸ್ತಾನದ ಜೊತೆಗೆ ಎರಡೂವರೆ ತಿಂಗಳು ನಡೆದ ಯುದ್ಧದಲ್ಲಿ ಆಪರೇಷನ್ ವಿಜಯದ ಮೂಲಕ ಭಾರತದ ಭೂಭಾಗವನ್ನ ವಶಕ್ಕೆ ಪಡೆದ ದಿನವಾಗಿದೆ. ದೇಶಕ್ಕಾಗಿ ಈ ವೇಳೆ 500 ವೀರ ಯೋಧರ ತನ್ನ ಪ್ರಾಣವನ್ನ ಅರ್ಪಿಸಿದ್ದಾರೆ.

ಗೌರವ ನಮನ ಸಲ್ಲಿಸುವ ವೇಳೆ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ ನಾಯ್ಕ, ರಕ್ಷಣಾ ಪಡೆಯ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರವಣೆ, ವಾಯುಸೇನಾ ಮುಖ್ಯಸ್ಥ ಮಾರ್ಷಲ್ ಆರ್.ಕೆ ಎಸ್ ಭಧುರಿಯಾ, ನೌಕಾದಳದ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಸಹ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ್ರು.




Leave a Reply

Your email address will not be published. Required fields are marked *

error: Content is protected !!