ಆಸೀಸ್ ನೆಲದಲ್ಲಿ ಟೀಂ ಇಂಡಿಯಾ ವಿಜಯ ಪತಾಕೆ

271

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ 4ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಪಡೆ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 2-1 ಅಂತರದಿಂದ ಟೀಂ ಇಂಡಿಯಾ ಸರಣಿಯನ್ನ ಕೈವಶ ಮಾಡಿಕೊಂಡಿದೆ. ಅಲ್ದೇ, ಐತಿಹಾಸಿಕ ಸಾಧನೆ ಮಾಡಿದೆ.

327 ರನ್ ಗಳ ಟಾರ್ಗೆಟ್ ಬೆನ್ನು ಹತ್ತಿದ ಭಾರತ ತಂಡ 7 ವಿಕೆಟ್ ಕಳೆದುಕೊಂಡು 329 ರನ್ ಗಳಿಸುವ ಮೂಲಕ 18 ಬೌಲ್ ಗಳು ಇರುವ ಮೊದ್ಲೇ ಗೆಲುವು ದಾಖಲಿಸಿದೆ. ಶುಭುನಮ್ ಗಿಲ್ 91, ರಿಷಿಬ್ ಪಂಥ್ ನಾಟೌಟ್ 89, ಚೇತೇಶ್ವರ ಪೂಜಾರ 56 ರನ್ ಗಳ ಭರ್ಜರಿ ಆಟದಿಂದಾಗಿ ಗೆಲುವು ದಾಖಲಿಸಿದೆ.

ಇದರೊಂದಿಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆದ್ದುಕೊಂಡಿದೆ. ಅಜಿಂಕ್ಯ ರಹಾನೆ 24, ವಾಸಿಂಗ್ಟನ್ ಸುಂದರ 22, ಮಯಾಂಕ್ ಅಗರ್ವಾಲ್ 9, ರೋಹಿತ ಶರ್ಮಾ 7, ಶ್ರಾದೂಲ್ ಠಾಕೂರ್ 2 ರನ್ ಗಳಿಸಿ ಔಟ್ ಆದ್ರು. ಆಸೀಸ್ ಕಮಿನ್ಸ್ 4, ಲೆಯಾನ್ 2 ಹಾಗೂ ಹಝಲ್ ವುಡ್ 1 ವಿಕೆಟ್ ಪಡೆದ್ರು.

ಭಾರತದ ಗೆಲುವಿಗೆ ಪ್ರಧಾನಿ ಮೋದಿ, ಬಿಸಿಸಿಐ ಅಧ್ಯಕ್ಷ ಸೌರವ ಗಂಗೂಲಿ, ಕೋಚ್ ರವಿಶಾಸ್ತ್ರಿ ಸೇರಿದಂತೆ ಪ್ರತಿಯೊಬ್ಬರು ಅಭಿನಂದನೆ ಸಲ್ಲಿಸಿದ್ದಾರೆ. ಆಟಗಾರರಲ್ಲಿ ಗಾಯದ ಸಮಸ್ಯೆ ಕಾಣಿಸಿಕೊಂಡು ಸಾಕಷ್ಟು ಟೆನ್ಷನ್ ನಲ್ಲಿದ್ದ ಟೀಂ ಇಂಡಿಯಾಗೆ ರಿಷಬ್ ಪಂಥ್, ಶುಭನಮ್ ಗಿಲ್, ಪೂಜಾರ ಬಿಗ್ ಬ್ರೇಕ್ ನೀಡುವ ಮೂಲಕ ಗೆಲುವಿನ ಹೀರೋ ಆದ್ರು.




Leave a Reply

Your email address will not be published. Required fields are marked *

error: Content is protected !!