ವರುಣನ ಆರ್ಭಟದ ನಡುವೆಯೂ ಗಣೇಶ ಹಬ್ಬದ ಸಂಭ್ರಮ

329

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದ ಬಹುತೇಕ ಭಾಗಗಳಲ್ಲಿ ವರಣು ಅಬ್ಬರಿಸುತ್ತಿದ್ದಾನೆ. ಪ್ರತಿಯೊಂದು ಜಿಲ್ಲೆಯಲ್ಲಿ ಮಳೆಯಿಂದ ಅಪಾರ ಹಾನಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ನದಿಯಾದ ರಸ್ತೆಗಳ ವಿಡಿಯೋಗಳು ವರೈಲ್ ಆಗುತ್ತಿದ್ದು, ಸರ್ಕಾರದ ವಿರುದ್ಧು, ಜನಪ್ರತಿನಿಧಿಗಳ ವಿರುದ್ಧ ಕೆಂಡ ಕಾರುತ್ತಿದ್ದಾರೆ.

ವರುಣನ ಆರ್ಭಟ ಇಷ್ಟೆಲ್ಲ ಇದ್ದರೂ ಜನರು ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಸಿಲಿಕಾನ್ ಸಿಟಿ, ಅರಮನೆ ನಗರಿ, ಸಕ್ಕರೆ ನಾಡು, ಕಾಫಿ ನಾಡು, ಮಲೆನಾಡು, ವಿದ್ಯಾಕಾಶಿ, ಕುಂದಾನಗರಿ, ಮುದ್ರಣ ಕಾಶಿ, ಗುಮ್ಮಟ ನಗರಿ, ಬಿಸಿಲು ನಗರಿ, ಗಿರಿಗಳ ನಾಡು ಹೀಗೆ ಪ್ರತಿ ಜಿಲ್ಲೆಯಲ್ಲಿ ಮೊದಲ ಪೂಜಿತನ ಸಂಭ್ರಮ ಮನೆ ಮಾಡಿದೆ.

ಹಳ್ಳಿಯಿಂದ ನಗರಗಳವರೆಗೂ ಬಡಾವಣೆ, ಏರಿಯಾಗಳಲ್ಲಿ ಸಾರ್ವಜನಿಕ ಗಣೇಶೋತ್ಸವದ ತಯಾರಿ ಜೋರಾಗಿದೆ. ಈಗಾಗ್ಲೇ ಹತ್ತು ಹಲವು ರೀತಿಯಲ್ಲಿ ವೇದಿಕೆ ಸಜ್ಜುಗೊಳಿಸಿದ್ದು, ಇಂದು ಗಣೇಶನನ್ನು ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ಪೂಜೆ ಸಲ್ಲಿಸಲಾಗುತ್ತೆ. ಕೆಲವು ಕಡೆ ಏಳು ದಿನ, ಒಂಬತ್ತು ದಿನ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗುತ್ತೆ.

ಸಾಂದರ್ಭಿಕ ಚಿತ್ರ




Leave a Reply

Your email address will not be published. Required fields are marked *

error: Content is protected !!