ಅಫ್ಗನ್ ಸೂಪರ್ ಫೋರ್ ತಲುಪಿದ ಮೊದಲ ತಂಡ

210

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಶಾರ್ಜಾದಲ್ಲಿ ನಡೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಅಫ್ಗನ್ ತಂಡ 7 ವಿಕೆಟ್ ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ, ಸೂಪರ್ ಫೋರ್ ಹಂತ ತಲುಪಿದ ಮೊದಲ ತಂಡವಾಗಿದೆ.

ಟಾಸ್ ಗೆದ್ದ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಮುಜೀಬ್ ರೆಹಮಾನ್ 3 ಹಾಗೂ ರಶೀದ್ ಖಾನ್ 3 ವಿಕೆಟ್ ಪಡೆಯುವ ಮೂಲಕ ಶಕೀಬ್ ಅಲ್ ಹಸನ್ ತಂಡಕ್ಕೆ ಶಾಕ್ ನೀಡಿದರು. ಇದರ ಪರಿಣಾಮ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 127 ರನ್ ಗಳ ಸಾಧಾರಣ ಸ್ಕೋರ್ ದಾಖಲಿಸಿತು. ಮೊಸದ್ದೆಕ್ ಹಸನ್ ಅಜೆಯ 48 ರನ್ ಗಳೇ ಗರಿಷ್ಠ ಸ್ಕೋರ್ ಆಗಿದೆ.

ಈ ಸ್ಕೋರ್ ಬೆನ್ನು ಹತ್ತಿದ ಅಫ್ಗನ್ ಟೀಂ ಇಬ್ರಾಹಿಂ ಜದ್ರಾನ್ ಅಜೆಯ 42, ನಬಿವುಲ್ ಜದ್ರಾನ್ ಅಜೆಯ 43 ರನ್ ಗಳ ಭರ್ಜರಿ ಆಟದಿಂದಾಗಿ18.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿ ಗೆಲುವು ಸಾಧಿಸಿತು. ನಬಿವುಲ್ ಜದ್ರಾನ್ 6 ಸಿಕ್ಸ್ ಬಾರಿಸಿದ್ದು ಪಂದ್ಯದ ಗತಿ ಬದಲಿಸಿತು. ಈ ಗೆಲುವಿನೊಂದಿಗೆ ಬಿ ಗುಂಪಿನ ತಂಡದಲ್ಲಿ ಸೂಪರ್ ಫೋರ್ ಹಂತ ತಲುಪಿದ ಮೊದಲ ತಂಡವಾಯಿತು.




Leave a Reply

Your email address will not be published. Required fields are marked *

error: Content is protected !!