ಅಫ್ಘನ್ ಕ್ರಿಕೆಟ್ ತಂಡದ ಪಾಲಿಗೆ 2023 ಲಕ್ಕಿ ವರ್ಷ

185

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಹಲವು ಅಚ್ಚರಿಗಳು ನಡೆಯುತ್ತಿವೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಸೆಮಿ ಫೈನಲ್ ನಿಂದಲೇ ಹೊರ ಬಿದ್ದಿದೆ. ಕ್ರಿಕೆಟ್ ಶಿಶು ಅಘ್ಘಾನಿಸ್ತಾನ್ ಸೆಮಿ ಆಸೆ ಜೀವಂತವಾಗಿಟ್ಟುಕೊಂಡಿದೆ. ಹೀಗಾಗಿ ಅಫ್ಘನ್ ಕ್ರಿಕೆಟ್ ತಂಡದ ಪಾಲಿಗೆ 2023 ಲಕ್ಕಿ ಎನ್ನಬಹುದು.

ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ್ ತಂಡ ಇದುವರೆಗೂ ಒಂದೂ ಪಂದ್ಯ ಗೆದ್ದಿರಲಿಲ್ಲ. ಆದರೆ, ಈಗ ಮೂರು ಪಂದ್ಯಗಳನ್ನು ಗೆದ್ದು 6 ಪಾಯಿಂಟ್ ಗಳೊಂದಿಗೆ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಸೋಮವಾರ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 241 ರನ್ ಗಳಿಗೆ ಆಲೌಟ್ ಮಾಡಿತು. ನಂತರ ಬ್ಯಾಟ್ ಮಾಡಿದ ಅಫ್ಘನ್ 45.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 242 ರನ್ ಗಳಿಸುವ ಮೂಲಕ ಭರ್ಜರಿ 7 ವಿಕೆಟ್ ಅಂತರದಿಂದ ಜಯ ಸಾಧಿಸಿದೆ.

ರಹಮತ್ ಶಾ 62, ನಾಯಕ ಶಹಿದಿ 58, ಓರ್ಮಝಿ 73 ರನ್ ಗಳ ಭರ್ಜರಿ ಆಟದಿಂದಾಗಿ ಸಿಂಹಳಿಯರನ್ನು ಬೇಟೆಯಾಡಲಾಗಿದೆ. ಫಾಝಲ್ಕ್ ಫಾರೂಕಿ 10 ಓವರ್ ಗಳಲ್ಲಿ 34 ರನ್ ಗಳಿಗೆ 4 ವಿಕೆಟ್ ಕಬಳಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಆದರು. ಇಂಗ್ಲೆಂಡ್, ಶ್ರೀಲಂಕಾ, ಪಾಕಿಸ್ತಾನನಂತ ಬಲಿಷ್ಠ ತಂಡಗಳಿಂತ ಅಫ್ಘಾನಿಸ್ತಾನ್ ಪಾಯಿಂಟ್ ಪಟ್ಟಿಯಲ್ಲಿ ಮೇಲೆ ಹೋಗಿದೆ. ಇದರೊಂದಿಗೆ ಸೆಮಿ ಫೈನಲ್ ಗೂ ಲಗ್ಗೆ ಹಾಕುವ ಸಾಧ್ಯತೆಯಿದ್ದು, ಉಳಿದ ತಂಡಗಳಿಗೂ ಆತಂಕ ಮೂಡಿದೆ.

ಇಂಗ್ಲೆಂಡ್, ಬಾಂಗ್ಲಾ, ಪಾಕ್, ಶ್ರೀಲಂಕಾ, ನೆದರ್ಲೆಂಡ್ ಬಹುತೇಕ ಟೂರ್ನಿಯಿಂದ ಹೊರ ಬಿದ್ದಂತೆಯಾಗಿವೆ. ಸೆಮಿ ಫೈನಲ್ ಪ್ರವೇಶಿಸಿದ ಮೊದಲ ತಂಡವಾದ ಇಂಡಿಯಾ, ಸೌಥ್ ಆಫ್ರಿಕಾ, ನ್ಯೂಜಿಲೆಂಡ್, ಆಸ್ತ್ರೇಲಿಯಾ ನಡುವೆ ಬಿಗ್ ಫೈಟ್ ನಡೆಯುವ ಸಾಧ್ಯತೆಯಿದೆ. ಇದೇ ರೀತಿ ಅಚ್ಚರಿಯ ಗೆಲುವು ಮುಂದಿನ ಪಂದ್ಯಗಳಲ್ಲಿಯೂ ಸಾಧಿಸಿದರೆ ಅಫ್ಘನ್ ತಂಡ ನ್ಯೂಜಿಲೆಂಡ್, ಆಸ್ಟ್ರೇಲಿಯಾ ತಂಡಗಳಲ್ಲಿ ಒಂದನ್ನು ಹೊರ ಹಾಕಿ ತಾನು ಸೆಮಿಗೆ ಎಂಟ್ರಿ ಕೊಡಬಹುದು.




Leave a Reply

Your email address will not be published. Required fields are marked *

error: Content is protected !!