ಪ್ರಜಾಸ್ತ್ರ ಸುದ್ದಿ
ವಿಜಯಪುರ: ಕ್ಯಾಂಟರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬುಧವಾರ ತಡರಾತ್ರಿ ಜಿಲ್ಲೆಯ ತಿಕೋಟಾ ತಾಲೂಕಿನ ರತ್ನಾಪುರ ಕ್ರಾಸ್ ಹತ್ತಿರ ನಡೆದಿದೆ.
ಅತಾಲಟ್ಟಿ ತಾಂಡಾದ ಪರಶುರಾಮ ಲಮಾಣಿ (60) ಹಾಗೂ ಹುಬನೂರ ತಾಂಡಾದ ಬಂಧು ರಾಠೋಡ (35) ಮೃತಪಟ್ಟ ಬೈಕ್ ಸವಾರರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ತಿಕೋಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.