24ನೇ ವಯಸ್ಸಿಗೇ ನಿವೃತ್ತಿ ಘೋಷಿಸಿದ ಅಫ್ಘಾನ್ ಬೌಲರ್

194

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಫ್ಘಾನಿಸ್ತಾನದ ವೇಗದ ಬೌಲರ್ ನವೀನ್ ಉಲ್ ಹಕ್ ಕೇವಲ 24ನೇ ವಯಸ್ಸಿಗೆ ಏಕದಿನ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಮಾಡಿದ್ದರೂ ಆಡಿರುವುದು ಕೇವಲ 7 ಪಂದ್ಯ, ಪಡೆದಿದ್ದು 14 ವಿಕೆಟ್.

ಈ ಕುರಿತು ಇನ್ಸಾಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದು 2023ರ ಏಕದಿನ ವಿಶ್ವಕಪ್ ಬಳಿಕ ನಿವೃತ್ತಿಯಾಗಲಿದ್ದು, ಟಿ-20 ಮಾದರಿಯಲ್ಲಿ ಮುಂದುವರೆಯುತ್ತೇನೆ. ತನಗೆ ಬೆಂಬಲ ನೀಡಿದವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನ್ ತಂಡದಲ್ಲಿ 7 ವರ್ಷದಲ್ಲಿ 7 ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದು, ಐಪಿಎಲ್ ಮಾದರಿಯ ಟೂರ್ನಿಯಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಎಲ್ ಪಿಎಲ್, ಬಿಬಿಎಲ್, ಪಿಎಸ್ಎಲ್ ಟೂರ್ನಿಯಲ್ಲಿಯೇ ಆಡಿದ್ದು ಹೆಚ್ಚು. ತಂಡದಲ್ಲಿ ಸ್ಥಾನ ಸಿಗದೆ ಇರುವ ಕಾರಣಕ್ಕೆ ನಿವೃತ್ತಿ ಘೋಷಿಸರಬಹುದು ಎನ್ನಲಾಗುತ್ತಿದೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ಟೀಂ ಇಂಡಿಯಾದ ವಿರಾಟ್ ಕೊಹ್ಲಿ ಜೊತೆಗಿನ ಕಾಳಗದಿಂದ ವ್ಯಾಪಕ ಚರ್ಚೆಯಲ್ಲಿದ್ದರು.




Leave a Reply

Your email address will not be published. Required fields are marked *

error: Content is protected !!