ನಟಿ ರೆಂಜೂಷಾ ಮೃತದೇಹ ಪತ್ತೆ

191

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ತಿರುವನಂತಪುರಂ: ಮಲಯಾಳಂ ನಟಿ ರೆಂಜೂಷಾ ಮೆನನ್(34) ಮೃತದೇಹ ಸೋಮವಾರ ಫ್ಲಾಟ್ ನಲ್ಲಿ ಪತ್ತೆಯಾಗಿದೆ. ಶ್ರೀಕರಿಯಾಮ್ ಫ್ಲ್ಯಾಟ್ ನಲ್ಲಿ ಮೃತದೇಹ ಪತ್ತೆಯಾಗಿದೆ. ಇದರಿಂದಾಗಿ ಮಾಲಿವುಡ್ ಚಿತ್ರರಂಗಕ್ಕೆ ಶಾಕ್ ಆಗಿದೆ.

ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದು, ಇದು ಆತ್ಮಹತ್ಯೆಯಾ ಅಥವ ಬೇರೆ ಏನಾದರೂ ಇದೇನಾ ಅನ್ನೋದರ ತನಿಖೆ ನಡೆದಿದೆ. ಕೊಚ್ಚಿ ಮೂಲದ ರೆಂಜೂಷಾ ಟಿವಿಯಲ್ಲಿ ನಿರೂಪಕಿಯಾಗಿ ಕರಿಯರ್ ಪ್ರಾರಂಭಿಸಿದರು.

ಬಾಲಾಮಣಿ, ಮಗಳುದೆ ಅಮ್ಮ, ಸ್ತ್ರೀ, ನಿಜಾಲಟ್ಟಂ ಸೇರಿದಂತೆ ಅನೇಕ ಧಾರವಾಹಿಗಳಲ್ಲಿ ನಟಿಸಿದರು. ಅದ್ಭುತ ದ್ವೀಪ್, ಬಾಂಬೆ ಮಾರ್ಚ್ 12, ಸಿಟಿ ಆಫ್ ಗಾಡ್, ಲಿಸಮ್ಮಾಯಡ್ ವೀಡು, ವನ್ ವೇ ಟಿಕೆಟ್ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!