ಆಸ್ಪತ್ರೆಯಲ್ಲಿ ಮಲಯಾಳಿ ಮಾತಾಡುವಂತಿಲ್ಲ: ಮುಂಜಾನೆ ಸುತ್ತೋಲೆ, ಸಂಜೆ ವಾಪಸ್

289

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೆಹಲಿ ಆಸ್ಪತ್ರೆಗಳಲ್ಲಿ ನರ್ಸ್ ಗಳು ಮಲಯಾಳಿ ಮಾತನಾಡಬಾರದು. ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಮಾತನಾಡಬೇಕು ಎಂದು ಭಾನುವಾರ ಮುಂಜಾನೆ ಸುತ್ತೋಲೆ ಹೊರಡಿಸಲಾಗಿತ್ತು. ಸಂಜೆಯೊಳಗೆ ಅದನ್ನ ವಾಪಸ್ ಪಡೆಯಲಾಗಿದೆ.

ನರ್ಸ್ ಗಳು ಮಾತ್ನಾಡುವುದು ನಮಗೆ ತಿಳಿಯುವುದಿಲ್ಲವೆಂದು ರೋಗಿಗಳು ದೂರು ನೀಡಿದ್ರು. ಇದಕ್ಕೆ ನರ್ಸಿಂಗ ಸೂಪರಿಂಟೆಂಡೆಂಟ್ ಮಲಯಾಳಿ ಮಾತ್ನಾಡಲು ನಿರ್ಬಂಧ ವಿಧಿಸಿತ್ತು. ಇದು ವಿವಾದವಾಗುತ್ತಿದ್ದಂತೆ, ವಾಪಸ್ ಪಡೆಯಲಾಗಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಅಧಿಕಾರಿ ಗೋವಿಂದ ವಲ್ಲಭ ಪಂಥ್, ಇದು ನಮ್ಮ ಗಮನಕ್ಕೆ ಬರದೆ ಆಗಿದೆ. ಸುತ್ತೋಲೆಯನ್ನ ವಾಪಸ್ ಪಡೆಯಲಾಗಿದೆ ಎಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!