ಸಿಂದಗಿ: ಗಣೇಶ ಮೆರವಣಿಗೆಗೆ ನಿರ್ಬಂಧ

386

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯಾದ್ಯಂತ ಗಣೇಶ ಹಬ್ಬ ಸಂಭ್ರಮ ಸಡಗರಿಂದ ನಡೆಯುತ್ತಿದೆ. ಇದೇ ರೀತಿಯ ಸಿಂದಗಿ ಪಟ್ಟಣದಲ್ಲಿ ವಿಜೃಂಭಣೆಯ ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಆದರೆ, ಪಟ್ಟಣದ ಕೆಲ ಪ್ರದೇಶಗಳು ಮತೀಯ ಸೂಕ್ಷ್ಮಗಳೆಂದು ಪರಿಗಣಿಸಿ ಅಲ್ಲಿ ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮೆರವಣಿಗೆಗೆ ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಪಟ್ಟಣದ ಸೋಮಲಿಂಗೇಶ್ವರ ಚೌಕದಿಂದ ಟಕ್ಕೆ ಮಸೀದಿ, ಪುರಸಭೆ ಕಾರ್ಯಾಲಯ, ತರಕಾರಿ ಮಾರುಕಟ್ಟೆ, ಟಿಪ್ಪು ಸುಲ್ತಾನ್ ಮಾರ್ಗದಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮೆರವಣಿಗೆ ಮಾಡುವುದಕ್ಕೆ ನಿರ್ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.

2009ರಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ದೇವಿ ಮೆರವಣಿಗೆ ವೇಳೆ ನಡೆದ ಘಟನೆ, 2014ರಲ್ಲಿ ಗಣೇಶ ಮೂರ್ತಿ ಮೆರವಣಿಗೆ ವಿಚಾರವಾಗಿ ನಡೆದ ಗಲಭೆ ಪ್ರಕರಣವನ್ನು ಉಲ್ಲೇಖಿಸಿ, ಎರಡು ಕೋಮಿನ ನಡುವೆ ಗಲಾಟೆಗಳು ನಡೆದಿವೆ. 2014ರ ಪ್ರಕರಣ ಇನ್ನು ನ್ಯಾಯಾಲಯದಲ್ಲಿದೆ. ಹೀಗಾಗಿ ಸೆಪ್ಟೆಂಬರ್ 19ರಿಂದ 29ರ ತನಕ ಗಣೇಶಮೂರ್ತಿ ಪ್ರತಿಷ್ಠಾಪನೆಗೊಂಡು ವಿಸರ್ಜನೆಗೊಳ್ಳುವ ತನಕ ಈ ಭಾಗದಲ್ಲಿ ಮೆರವಣಿಗೆ ನಿರ್ಬಂಧಿಸಿ ಆದೇಶಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!