ಬ್ರೇಕಿಂಗ್ ನ್ಯೂಸ್: ಬಡ್ಡಿ ದರ ಇಳಿಕೆ ಮಾಡಿದ ಆರ್ ಬಿಐ

361

ನವದೆಹಲಿ: ಕರೋನಾದಿಂದ ಇಡೀ ದೇಶ ಲಾಕ್ ಡೌನ್ ಆಗಿದ್ದು ಆರ್ಥಿಕ ಸ್ಥಿತಿ ಕುಸಿದಿದೆ. ಹೀಗಾಗಿ ಆರ್ ಬಿಐ ಮಹತ್ವದ ನಿರ್ಧಾರವೊಂದು ತೆಗೆದುಕೊಂಡಿದ್ದು, ಬಡ್ಡಿ ದರವನ್ನ ಇಳಿಕೆ ಮಾಡಿದೆ. ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಆರ್ ಬಿಐ ಗರ್ವನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ರೆಪೊ ದರ(ಬಡ್ಡಿ) 5.1 ರಿಂದ 4.4ಗೆ ಇಳಿಕೆ ಮಾಡಲಾಗಿದೆ. ಈ ಮೂಲಕ ಬಡ್ಡಿ ದರದಲ್ಲಿ 75 ಬೇಸಿಸ್ ಪಾಯಿಂಟ್ ಗಳನ್ನ ಕಡಿತಗೊಳಿಸಲಾಗಿದೆ. ಕೃಷಿ ಸಾಲ, ಚಿನ್ನದ ಸಾಲ, ಗೃಹ ಸಾಲ, ವಾಹನ ಸಾಲ ಸೇರಿದಂತೆ ಎಲ್ಲ ರೀತಿಯ ಸಾಲಗಳಿಗೆ ಮೂರು ತಿಂಗಳು ವಿನಾಯ್ತಿ ನೀಡಲಾಗಿದೆ ಈ ಮೂಲಕ ಬ್ಯಾಂಕ್ ಸಾಲಗಾರರಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಇಎಂಐ ಮರು ಮಾವತಿಯನ್ನ ಮೂರು ತಿಂಗಳ ವಿನಾಯ್ತಿ ನೀಡಲಾಗಿದೆ. ಮಾರ್ಚ್ 1 ರಿಂದ ಅನ್ವಯವಾಗುವಂತೆ ಜಾರಿ ಮಾಡಲಾಗಿದೆ. ಇದು ಎಲ್ಲ ಬ್ಯಾಂಕ್ ಗಳಿಗೂ ಅನ್ವಿಸಲಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!