ಎಬಿಡಿ ಆರ್ಭಟ: ಡೆಲ್ಲಿಗೆ 172 ರನ್ ಟಾರ್ಗೆಟ್

238

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಹಮದಾಬಾದ್: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಎಬಿಡಿ ಭರ್ಜರಿ ಬ್ಯಾಟ್ ಬೀಸಿದ್ರು. 42 ಬೌಲ್ ಗಳಲ್ಲಿ 75 ರನ್ ಗಳಿಸುವ ಮೂಲಕ ಮತ್ತೊಮ್ಮೆ ಆಪತ್ತಬಾಂಧವನಾದರು. ಹೀಗಾಗಿ ಅಂತಿಮವಾಗಿ 5 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿದ್ರು.

ಟಾಸ್ ಸೋತು ಬ್ಯಾಟ್ ಮಾಡಿದ ಆರ್ ಸಿಬಿಗೆ ಆವಿಶ್ ಖಾನ್ ಹಾಗೂ ಇಶಾಂತ್ ಶರ್ಮಾ ಶಾಕ್ ನೀಡಿದ್ರು. 12 ರನ್ ಗಳೊಂದಿಗೆ ಆಡ್ತಿದ್ದ ವಿರಾಟ ಕೊಹ್ಲಿ ವಿಕೆಟ್ ಆವಿಶ್ ಖಾನ್ ಪಡೆದ. ನೆಕ್ಸ್ಟ್ ಓವರ್ ನಲ್ಲಿ ಇಶಾಂತ್ ಪಡಿಕಲ್ (17) ವಿಕೆಟ್ ಪಡೆದ್ರು. ಆಗ ಆರ್ ಸಿಬಿ ರನ್ 30 ಮಾತ್ರವಾಗಿತ್ತು.

ಬಳಿಕ ಬಂದ ಎಬಿಡಿ ಹಾಗೂ ಪಟಿದಾರ್ 50 ರನ್ ಜೊತೆಯಾಟವಾಡಿದ್ರು. ಪಟಿದಾರ್ 31 ರನ್ ಗೆ ಔಟ್ ಆದ್ರು. ಮ್ಯಾಕ್ಸ್ ವೆಲ್ 25, ವಾಷಿಂಗ್ಟನ್ ಸುಂದರ 6 ರನ್ ಗಳಿಸಿದ್ರು. ಇನ್ನೊಂದು ಕಡೆ ಎಬಿಡಿ ಬ್ಯಾಟ್ ಬೀಸ್ತಿದ್ರು. ಲಾಸ್ಟ್ ಓವರ್ ಹಾಕಿದ ಸ್ಟೋಯಿನ್ಸ್ ಗೆ 23 ರನ್ ಚಚ್ಚಿದ. ಇದ್ರಿಂದಾಗಿ ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು.

ಡೆಲ್ಲಿ ಪರ ಇಶಾಂತ, ರಬಡಾ, ಖಾನ್, ಪಟೇಲ್, ಮಿಶ್ರಾ ತಲಾ 1ವಿಕೆಟ್ ಪಡೆದ್ರು.


TAG


Leave a Reply

Your email address will not be published. Required fields are marked *

error: Content is protected !!