ಸಿನಿ ದುನಿಯಾದಲ್ಲಿ ಇತ್ತೀಚೆಗೆ ಬೋಲ್ಡ್ ಆಗಿ ನಟಿಸುವುದು, ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ಕಾಮನ್ ಆಗಿದೆ. ಹಾಲಿವುಡ್ ಗಾಳಿ ಬಾಲಿವುಡ್ ಗೆ ಬಿಸಿ ಅದು ಸೌಥ್ ಸಿನಿ ವರ್ಲ್ಡ್ ತನಕ ಬಂದು ಬಹಳ ಕಾಲವಾಯ್ತು. ಹಾಗಂತ ಈ ನಟಿಗೆ ಹೀಗೆ ಅನ್ನಬಾರದಿತ್ತು.
ಆರ್ ಎಕ್ಸ್ 100 ಸಿನಿಮಾ ಮೂಲಕ ನಟಿ ಪಾಯಲ್ ರಜಪೂತ್ ಸೌಥ್ ಚಿತ್ರ ಜಗತ್ತಿಗೆ ಎಂಟ್ರಿ ಪಡೆದ್ಳು. ಪಂಜಾಬ್ ನಲ್ಲಿ ನಟಿಸಿದ್ದ ಪಾಯಲ್, ಬಾಲಿವುಡ್ ಬಳಿಕ ಕಾಲಿವುಡ್ ಗೆ ಬಂದವಳು. ಇದೀಗ ಈ ನಟಿಯ ಆರ್ ಡಿಎಕ್ಸ್ ಲವ್ ಅನ್ನೋ ಸಿನ್ಮಾದ ಟೀಸರ್ ಬಿಡುಗಡೆಯಾಗಿದೆ. ಇದನ್ನ ನೋಡಿದ ಕೆಲವರು ಪೋರ್ನ್ ಸ್ಟಾರ್, ಸಿಲ್ಕ್ ಸ್ಮಿತಾ ಅಂತೆಲ್ಲ ಕಾಮೆಂಟ್ ಮಾಡಿದ್ದಾರಂತೆ.
ಪೋರ್ನ್ ಸ್ಟಾರ್ ಅಂದ್ರೆ ಏನ್ ಅರ್ಥ. ಇದು ನನ್ಗೆ ತುಂಬಾ ಬೇಸರ ತರಿಸಿದೆ ಅಂತಾ ನಟಿ ಪಾಯಲ್ ಹೇಳಿದ್ದಾಳೆ. ಈ ಮಾತಿನಿಂದ ನನ್ಗೆ ರಾತ್ರಿಯಲ್ಲ ನಿದ್ದೆ ಹತ್ತಿಲ್ಲವೆಂದು ಹೇಳಿಕೊಂಡಿದ್ದಾಳೆ.