ಕುಂಬ್ಳೆ, ಮುತ್ತಯ್ಯ ರೆಕಾರ್ಡ್ ಬ್ರೇಕ್ ಮಾಡಿದ ಅಶ್ವಿನ

383

ವಿಶಾಖಪಟ್ಟಣಂ: ಸೌಥ್ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ, ಬೌಲಿಂಗ್ ದಂತಕಥೆಗಳಾದ ಭಾರತದ ಅನಿಲ ಕುಂಬ್ಳೆ ಹಾಗೂ ಶ್ರೀಲಂಕಾದ ಮುತ್ತಯ್ಯ ಮುರುಳಿಧರ ದಾಖಲೆಗಳನ್ನ ಬ್ರೇಕ್ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ 350 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ರು. ಇಂದು 5ನೇ ದಿನದಾಟದಲ್ಲಿ ಬ್ರೂನ್ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ರು. 66 ಟೆಸ್ಟ್ ಪಂದ್ಯಗಳಲ್ಲಿ 350 ವಿಕೆಟ್ ಪಡೆದು ಇಷ್ಟೇ ಪಂದ್ಯಗಳಲ್ಲಿ 530 ವಿಕೆಟ್ ಪಡೆದಿರುವ ಶ್ರೀಲಂಕಾದ ಮಾಜಿ ಆಟಗಾರ ಮುತ್ತಯ್ಯ ಮುರುಳಿಧರ ದಾಖಲೆ ಸರಿಗಟ್ಟಿದ್ರು.

Image result for ravichandran ashwin 350 wickets
ತಂಡದ ಇತರೆ ಆಟಗಾರರ ಶುಭಾಶಯ ಪಡೆದ ಅಶ್ವಿನ

ಇನ್ನು ಭಾರತದ ಮಾಜಿ ಆಟಗಾರ ಕನ್ನಡಿಗ ಅನಿಲ ಕುಂಬ್ಳೆ ಅವರು 77 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ರು. ಭಾರತದ ಆಟಗಾರರು ಒಬ್ಬರಾದ್ಮೇಲೆ ಒಬ್ಬರು ಈ ಟೆಸ್ಟ್ ನಲ್ಲಿ ಹಲವು ದಾಖಲೆಗಳನ್ನ ಬ್ರೇಕ್ ಮಾಡ್ತಿರುವುದು ಖುಷಿಯ ಸಂಗತಿ.




Leave a Reply

Your email address will not be published. Required fields are marked *

error: Content is protected !!