ಗೆಲುವಿನ ದಡ ಸೇರಿಸಿದ ಅಶ್ವಿನ್-ಶ್ರೇಯಸ್

227

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಶೇರ್ ಈ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸುವ ಮೂಲಕ 2-0 ಲೀಡ್ ನೊಂದಿಗೆ ಸರಣಿಯನ್ನು ವಶ ಪಡಿಸಿಕೊಂಡಿತು. 3 ದಿನದಾಟದ ಅಂತ್ಯ ಪ್ರಮುಖ 4 ಆಟಗಾರರು ವಿಕೆಟ್ ಒಪ್ಪಿಸಿದ್ದರು. ಆಗ ಕ್ರಿಸ್ ನಲ್ಲಿ ಅಕ್ಷರ್ ಪಟೇಲ್, ಜಯದೇವ್ ಇದ್ದರು.

4ನೇ ದಿನವಾದ ಭಾನುವಾರ ಆಟು ಶುರುವಾಯಿತು. ಅಕ್ಷರ್ 34, ಜಯದೇವ್ 13 ರನ್ ಗಳಿಸಿ ಔಟ್ ಆದರು. ಆಗ ಭಾರತ 71 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿತು. ನಂತರ ಬಂದ ರಿಷಬ್ ಪಂಥ್ ಸಹ 9 ರನ್ ಗೆ ಔಟ್ ಆಗಿ ನಿರಾಸೆ ಮೂಡಿಸಿದ. ಕೊನೆಗೆ ತಂಡದ ಜವಾಬ್ದಾರಿ ಅನುಭವಿ ಅಶ್ವಿನ್, ಯುವ ಆಟಗಾರ ಶ್ರೇಯಸ್ ಅಯ್ಯರ್ ಮೇಲೆ ಬಿತ್ತು.

ಮುಂದೆ ಅಶ್ವಿನ್(42), ಶ್ರೇಯಸ್(29) ಬಾಂಗ್ಲಾ ಬೌಲರ್ ಗಳನ್ನು ಎದುರಿಸಿ ಮುರಿಯದ 52 ರನ್ ಗಳ ಜೊತೆಯಾಟದೊಂದಿಗೆ ಭಾರತವನ್ನು ಗೆಲುವಿನ ದಡ ಸೇರಿಸಿದರು. ಕೊನೆಗೆ 7 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ 3 ವಿಕೆಟ್ ಅಂತರದಿಂದ ಗೆದ್ದು ಸರಣಿಯನ್ನು 2-0ದಿಂದ ವಶಪಡಿಸಿಕೊಂಡಿತು. ಚೇತೇಶ್ವರ್ ಪೂಜಾರ ಪ್ಲೇಯರ್ ಆಫ್ ದಿ ಸಿರೀಸ್, ರವಿಚಂದ್ರನ್ ಅಶ್ವಿನ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.




Leave a Reply

Your email address will not be published. Required fields are marked *

error: Content is protected !!