ನಾಳೆ ಸಂಪೂರ್ಣ ಲಾಕ್ ಡೌನ್ ಆಗುತ್ತಾ? ಬೇಕಾಬಿಟ್ಟಿ ತಿರುಗಾಡ್ತಾರಾ?

350

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಲಾಕ್ ಡೌನ್ ಸಡಿಲಿಕೆಯನ್ನ ಎಲ್ಲೆಡೆ ಮಾಡಲಾಗಿದೆ. ಆದ್ರೆ, ರಾಜ್ಯದಲ್ಲಿ ಭಾನುವಾರ ಒಂದು ದಿನ ಲಾಕ್ ಡೌನ್ ಇರುತ್ತೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಹೀಗಾಗಿ ಲಾಕ್ ಡೌನ್ 4.0 ಅಂತ್ಯದ ಮೊದಲ ಭಾನುವಾರವಿದು. ಕೊನೆಯಲ್ಲೊಂದು ಭಾನುವಾರ ಬರುತ್ತೆ. ಆದ್ರೆ, ಸಡಿಲಿಕೆಯನ್ನ ದುರ್ಬಳಕೆ ಮಾಡಿಕೊಂಡಿರುವ ಜನರು, ನಾಳೆ ಸಂಪೂರ್ಣವಾಗಿ ಸೈಲೆಂಟ್ ಆಗ್ತಾರಾ ಅನ್ನೋ ಪ್ರಶ್ನೆಯಿದೆ.

ಮೇ 31ರ ತನಕ ಲಾಕ್ ಡೌನ್ ಇದೆ. ಇದರ ನಡುವೆ ಕೇಂದ್ರದ ಮಾರ್ಗಸೂಚಿ ಅನ್ವಯ ಒಂದಿಷ್ಟು ವಿನಾಯ್ತಿ ನೀಡಲಾಗಿದೆ. ಆದ್ರೆ, ಜನರು ಅದಾಗ್ಲೇ ಸಹಜ ಜೀವನ ನಡೆಸ್ತಿದ್ದಾರೆ. ಸೋಂಕು ಕಡಿಮೆಯಿದ್ದ ಟೈಂನಲ್ಲಿ ಫುಲ್ ಟೈಟ್ ಮಾಡಿದ್ದ ಸರ್ಕಾರ, ಸೋಂಕು ಹೆಚ್ಚಾಗ್ತಿರುವ ಹೊತ್ತಿನಲ್ಲಿ ಸಡಿಲಿಕೆ ಮಾಡಿ ಯಡವಟ್ಟು ಮಾಡಿಕೊಂಡಿದೆ. ಹೀಗಿರುವಾಗ ನಾಳೆ ಜನರು ಹೊರ ಬರದೆ ಮನೆಯಲ್ಲಿ ಉಳಿಯುತ್ತಾರಾ ಗೊತ್ತಿಲ್ಲ. ಇತ್ತ ಸರ್ಕಾರ ಸಹ ಮೊದಲಿನಂತೆ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಳ್ಳುತ್ತೆ ಅನ್ನೋ ಅನುಮಾನವಿದೆ.

ರಾಜ್ಯದಲ್ಲಿ ಇದೀಗ ಪ್ರತಿನಿತ್ಯ ಸರಾಸರಿ 100ರಷ್ಟು ಸೋಂಕು ಪ್ರಕಾರಣಗಳು ಪತ್ತೆಯಾಗ್ತಿವೆ. ಆದ್ರೂ, ಜನಕ್ಕೆ ಬುದ್ದಿ ಬಂದಿಲ್ಲ. ಖಜಾನೆ ಖಾಲಿಯಾಗಿರುವುದ್ರಿಂದ ಸರ್ಕಾರವೂ ಜನರನ್ನ ಫ್ರೀ ಬಿಟ್ಟಿದೆ. ಇದೆಲ್ಲವನ್ನೂ ಗಮನಿಸಿದ್ರೆ ನಾಳೆಯ ಲಾಕ್ ಡೌನ್ ಸಕ್ಸಸ್ ಆಗೋದು ತುಂಬಾ ಕಷ್ಟವಿದೆ. ಊರು ಕೊಳ್ಳೆ ಹೊಡಿದ್ಮೇಲೆ ದೊಡ್ಡಿ ಬಾಗಿಲು ಹಾಕಿದರಂತೆ. ಹಂಗ್ ಆಗಿದೆ ರಾಜ್ಯದ ಪರಿಸ್ಥಿತಿ.




Leave a Reply

Your email address will not be published. Required fields are marked *

error: Content is protected !!