ಅಬ್ಬರದ ಮಳೆಗೆ ಮನೆಗಳು ಜಖಂ.. ಬುಡಸಮೇತ ಉರುಳಿದ ಮರಗಳು

367

ಮಂಡ್ಯ: ಕಸಬಾ ಹೋಬಳಿಯ ಹಿರಿಕಳಲೆ ಗ್ರಾಮದಲ್ಲಿ ಬಿರುಗಾಳಿ ಸಹಿತ ಭರ್ಜರಿ ಮಳೆಯಾಗಿದೆ. ಇದರ ಪರಿಣಾಮ, ಜಿಲ್ಲಾ ಪಂಚಾಯತ ಸದಸ್ಯ ರಾಮದಾಸ ಅವರ ಮನೆ ಸೇರಿದಂತೆ ಹತ್ತಾರು ಜನರ ಮನೆಗಳು ಜಖಂಯಾಗಿವೆ. ಅಲ್ದೇ, ಅವರ ತೋಟದಲ್ಲಿನ ಮರಗಳು ಉರುಳಿ ಬಿದ್ದಿವೆ.

ತಾಲೂಕಿನಲ್ಲಿ ಕುಂಭದ್ರೋಣ ಮಳೆಯಿಂದಾಗಿ ಗ್ರಾಮದ ರವಿಕುಮಾರ, ಹೊನ್ನಮ್ಮ, ಜವರಮ್ಮ, ಮಂಜೇಗೌಡ, ಮಾಕೇಗೌಡ, ರಮೇಶ, ನಂಜೇಗೌಡ, ರವಿ ಸೇರಿದಂತೆ ಹಲವಾರು ರೈತರ ಮನೆಗಳ ಹೆಂಚುಗಳು ಹಾರಿ ಹೋಗಿವೆ. ತೋಟದಲ್ಲಿನ ನೂರಾರು ತೆಂಗು, ಅಡಿಕೆ, ಬಾಳೆ ಮರಗಳು ಬುಡಸಮೇತ ನೆಲಕ್ಕೆ ಉರುಳಿವೆ. ಇದ್ರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಕಂದಾಯ ಇಲಾಖೆಯ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ಆಗಮಿಸಿ ನಷ್ಠದ ಅಂದಾಜಿನ ಸರ್ವೇ ಕಾರ್ಯನಡೆಸಿ ಪರಿಹಾರದ ನೆರವು ನೀಡಬೇಕೆಂದು ಜಿಲ್ಲಾ ಪಂಚಾಯತಿ ಸದಸ್ಯ ರಾಮದಾಸ, ತಾಲೂಕು ಆಡಳಿತ ಹಾಗೂ ಜಿಲ್ಲಾಧಿಕಾರಿಗಳನ್ನ ಒತ್ತಾಯಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!