ಸಿಂದಗಿ, ಹೂವಿನ ಹಿಪ್ಪರಗಿಗೂ ‘ಮಹಾ’ ಸೋಂಕು.. ಕ್ವಾರಂಟೈನ್ ನಲ್ಲಿದ್ದವರಿಗೆ ಆತಂಕ ಶುರು!

630

ವಿಜಯಪುರ: ಗುಮ್ಮಟನಗರಿಯಲ್ಲಿ ನಿನ್ನೆ 7 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ಮೊದಲ ಬಾರಿಗೆ ನಗರದಿಂದ ಹೊರಗೆ ಸೋಂಕು ಕಾಣಿಸಿಕೊಂಡಿದೆ. ಅಂದ್ರೆ ಸಿಂದಗಿ ಪಟ್ಟಣ ಹಾಗೂ ಹೂವಿನ ಹಿಪ್ಪರಗಿಯಲ್ಲಿ ಕರೋನಾ ಸೋಂಕು ಮೊದಲ ಬಾರಿಗೆ ಪತ್ತೆಯಾಗಿವೆ.

ವಿಜಯಪುರ ನಗರದಲ್ಲಿ ಒಟ್ಟು 4 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ರೆ, ಸಿಂದಗಿ 1 ಹಾಗೂ ಹೂವಿನ ಹಿಪ್ಪರಗಿಯಲ್ಲಿ 2 ಕೇಸ್ ಪತ್ತೆಯಾಗುವ ಮೂಲಕ, ನಗರದಿಂದ ಮೊದಲ ಬಾರಿಗೆ ತಾಲೂಕುಗಳಿಗೆ ಸೋಂಕು ಹರಡಿದೆ. ಇದಕ್ಕೆ ಹೊರ ರಾಜ್ಯದ ಸಂಪರ್ಕವೇ ಕಾರಣವಾಗಿದೆ. ಅದರಲ್ಲೂ ಮಹಾರಾಷ್ಟ್ರದಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿದೆ.

35 ವರ್ಷದ ಪುರುಷದ ಪೇಸೆಂಟ್ ನಂಬರ್ 1725, 15 ವರ್ಷದ ಬಾಲಕಿ ಪೇಸೆಂಟ್ ನಂಬರ್ 1726ರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರು ಮಹಾರಾಷ್ಟ್ರದಿಂದ ಬಂದವರು ಆಗಿದ್ದಾರೆ. 20 ವರ್ಷದ ಪೆಸೆಂಟ್ ನಂಬರ್ 1729 ಸಿಂದಗಿ ಪಟ್ಟಣದವನಾಗಿದ್ದಾನೆ. ಇನ್ನು ಹೂವಿನ ಹಿಪ್ಪರಗಿಯಲ್ಲಿ 36 ವರ್ಷದ ಪೆಸೆಂಟ್ ನಂಬರ್ 1727 ಹಾಗೂ 29 ವರ್ಷದ ಮಹಿಳೆ ಪೆಸೆಂಟ್ ನಂಬರ್ 1728ರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಸಂಸ್ಥಾ ಕ್ವಾರಂಟೈನ್ ನಲ್ಲಿ ಆತಂಕ:

ಕರೋನಾ ಸೋಂಕು ಸಂಸ್ಥಾ ಕ್ವಾರಂಟೈನ್ ನಲ್ಲಿದ್ದವರಲ್ಲಿ ಕಂಡು ಬಂದಿದ್ರಿಂದ ಸಿಂದಗಿ ಹಾಗೂ ಹೂವಿನ ಹಿಪ್ಪರಗಿಯಲ್ಲಿನ ಸಂಸ್ಥಾ ಕ್ವಾರಂಟೈನ್ ನಲ್ಲಿರುವ ಜನರಲ್ಲಿ ಒಂದಿಷ್ಟು ಆತಂಕ ಮೂಡಿದೆ. ಯಾಕಂದ್ರೆ, ಸಂಸ್ಥಾ ಕ್ವಾರಂಟೈನ್ ನಲ್ಲಿ ಎಲ್ಲರೂ ಒಟ್ಟಿಗೆ ಇರುವುದ್ರಿಂದ ಸಹಜವಾಗಿಯೇ ಇವರಲ್ಲಿ ಆತಂಕ ಮೂಡಿದೆ.




Leave a Reply

Your email address will not be published. Required fields are marked *

error: Content is protected !!