ಟಾಲಿವುಡ್ ಹಿರಿಯ ನಟ ಚಲಪತಿ ರಾವ್ ನಿಧನ

251

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ತೆಲುಗು ಚಿತ್ರರಂಗದ ಹಿರಿಯ ನಟ ಚಲಪತಿ ರಾವ್(75) ಭಾನುವಾರ ಮುಂಜಾನೆ ನಿಧನರಾಗಿದ್ದಾರೆ. ಹೃದಯಾಘಾತದಿಂದ ಹೈದ್ರಾಬಾದ್ ನಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ ಚಲಪತಿ ರಾವ್, ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 2022ನೇ ವರ್ಷದಲ್ಲಿ ಟಾಲಿವುಡ್ ನಲ್ಲಿ ಹಲವು ನಟರು ನಿಧನರಾದರು. ಸೂಪರ್ ಸ್ಟಾರ್ ಕೃಷ್ಣ, ಮೊನೆ ಕೈಕಲಾ ಸತ್ಯನಾರಾಯಣ, ಕೃಷ್ಣಂ ರಾಜು ಇತ್ತೀಚೆಗೆ ನಿಧನ ಹೊಂದಿದರು.

ಚಲಪತಿ ರಾವ್ ಅವರ ಪುತ್ರಿ ಅಮೆರಿಕಾದಿಂದ ಬರಬೇಕಿದೆ. ಇಂದು ಅಭಿಮಾನಿಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತೆ. ಪುತ್ರ ರವಿ ಬಾಬು ನಟ ಹಾಗೂ ನಿರ್ಮಾಪಕರಾಗಿದ್ದಾರೆ. ಇಬ್ಬರು ಪುತ್ರಿಯರು, ಓರ್ವ ಪುತ್ರ, ಪತ್ನಿಯನ್ನು ಅಗಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!