ಹಂಪಿ ಪ್ರವಾಸಕ್ಕೆ ಬಂದ ಬೆಲ್ಜಿಯಂ ಹುಡುಗಿ ಗೈಡ್ ಮದುವೆಯಾದಳು

314

ಪ್ರಜಾಸ್ತ್ರ ಸುದ್ದಿ

ವಿಜಯನಗರ: ವಿಶ್ವವಿಖ್ಯಾತ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ 5 ವರ್ಷಗಳ ಹಿಂದೆ ಪ್ರವಾಸಕ್ಕೆ ಬಂದಿದ್ದ ಬೆಲ್ಜಿಯಂ ಮೂಲದ ಯವತಿ, ಇಲ್ಲಿಯ ಗೈಡ್ ಹಾಗೂ ಆಟೋ ಡ್ರೈವರ್ ಆಗಿರುವವನ್ನು ಮದುವೆಯಾಗಿದ್ದಾಳೆ.

ಶುಕ್ರವಾರ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಬೆಲ್ಜಿಯಂನ ಕೆಮಿಲ್ ಹಾಗೂ ಗೈಡ್ ಅನಂತರಾಜು ಅವರ ಮದುವೆ ನಡೆದಿದೆ. ಹಿಂದೂ ಸಂಪ್ರದಾಯದಂತೆ ಕುಟುಂಬಸ್ಥರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ.

ಕಳೆದ ಐದು ವರ್ಷಗಳ ಹಿಂದೆ ಕೆಮಿಲ್ ಹಂಪಿಗೆ ಬಂದಿದ್ದಳು. ಆಗ ಅನಂತರಾಜು ಐತಿಹಾಸಿಕ ಸ್ಥಳದ ಗೈಡ್  ಆಗಿದ್ದ. ಆತನ ಮಾರ್ಗದರ್ಶನ, ನಡೆ, ನುಡಿ ಇಷ್ಟವಾಗಿತ್ತು. ಕೆಮಿಲ್ ಬೆಲ್ಜಿಯಂಗೆ ತೆರಳಿದ ನಂತರವೂ ಅನಂತರಾಜು ಜೊತೆಗೆ ಚಾಟಿಂಗ್ ಮಾಡುತ್ತಿದ್ದಳು. ಸ್ನೇಹ ಮುಂದುವರೆದು ಪ್ರೀತಿಗೆ ತಿರುಗಿದೆ. ಇಬ್ಬರು ಮನೆಯಲ್ಲಿ ಹೇಳಿದ್ದಾರೆ. ಎರಡು ಕುಟುಂಬಸ್ಥರ ಒಪ್ಪಿಗೆ ನಂತರ ಇಂದು(ಶುಕ್ರವಾರ) ಮದುವೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!