ಸೆನ್ಸಾರ್ ಮಂಡಳಿ ವಿರುದ್ಧ ನಿರ್ದೇಶಕ ಮಂಸೋರೆ ಬೇಸರ ಯಾಕೆ?

164

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ನಿರ್ದೇಶಕ ಮಂಸೋರೆ ಉತ್ತಮ ಸಿನಿಮಾಗಳನ್ನು ನೀಡಿದ ನಿರ್ದೇಶಕರಲ್ಲಿ ಒಬ್ಬರು ಹಾಗೂ ಭರವಸೆ ಮೂಡಿಸಿರುವ ಯುವ ನಿರ್ದೇಶಕರು. ಈ ನೆಲದ ಕಥೆಯನ್ನು ತೆಗೆದುಕೊಂಡು ಸಿನಿಮಾ ಮಾಡಿ ರಾಷ್ಟ್ರೀಯ ಪ್ರಶಸ್ತಿ ಪಡೆದವರು. ಇದೀಗ ಅವರು ಸೆನ್ಸರ್ ಮಂಡಳಿ ವಿರುದ್ಧ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಯೆಸ್, ಈ ಬಗ್ಗೆ ಟ್ವೀಟ್ ಮಾಡಿರುವ ಅವರು ತಮ್ಮ 19.20.21 ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಿರುವ ಬಗ್ಗೆ ಬರೆದಿದ್ದಾರೆ. ನಮ್ಮ ಕೆಲಸ ಏಕತಾನತೆ ಆಗ್ತಿದೆಯಾ ಅಥವಾ ವೈವಿಧ್ಯತೆಯನ್ನು ಉಳಿಸಿಕೊಂಡಿದೆಯಾ ಅನ್ನೋದಕ್ಕೆ ಈ ಸೆನ್ಸಾರ್ ಕಮಿಟಿ ನೀಡುವ ಸರ್ಟಿಫಿಕೇಟ್ ಸಾಕ್ಷಿ ಎಂದು ಕಾಲೆಳೆದಿದ್ದಾರೆ.

19.20.21 ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಲಾಗಿದೆ. ಅಂದರೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ನೋಡಬಾರದು, ಕುಟುಂಬ ಸಮೇತ ಕುಳಿತು ನೋಡಲು ಆಗದ ಸಿನಿಮಾ ಅನ್ನೋವ ಹಾಗೇ ಬಿಂಬಿತವಾಗುತ್ತೆ. ಯು, ಯುಎ ಸರ್ಟಿಫಿಕೇಟ್ ನೀಡಿದರೆ ನೋಡುಗರ ನಿರ್ಬಂಧಗಳು ಇರುವುದಿಲ್ಲ. ಎ ಪ್ರಮಾಣಪತ್ರ ನೀಡಿದಾಗ ನೋಡುಗರ ದೃಷ್ಟಿಕೋನ ಬದಲಾಗುತ್ತೆ. ಹೀಗಾಗಿ ಸಿನಿಮಾ ಹೆಚ್ಚು ಜನಕ್ಕೆ ತಲುಪದೆ ಹೋಗುತ್ತೆ. ಇದೆ ಕಾರಣಕ್ಕೆ ತಮ್ಮ ಹಿಂದಿನ ಸಿನಿಮಾಗಳಿಗೆ ನೀಡಿದ ಸರ್ಟಿಫಿಕೇಟ್ ಆಧಾರದಲ್ಲಿ ಮಂಸೋರೆ ಅವರು ಟ್ವೀಟ್ ಮಾಡಿದ್ದಾರೆ.

ಹರಿವು, ನಾತಿಚರಾಮಿ, ಆಕ್ಟ್ 1978 ಚಿತ್ರಗಳು ವಾಸ್ತವದ ಪ್ರತಿರೂಪದಂತಿವೆ. ಈಗ ಸತ್ಯ ಘಟನೆ ಆಧರಿತಿ ಕಥೆ ಹೇಳುತ್ತಿದ್ದು, ಆದಷ್ಟು ಬೇಗ ಬಿಡುಗಡೆಯ ದಿನಾಂಕ ತಿಳಿಸುತ್ತೇವೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!