ಲಥಿಮ್-ಕೇನ್ ಆಟಕ್ಕೆ ಟೀಂ ಇಂಡಿಯಾ ಶರಣು

143

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಈಡಾನ್ ಪಾರ್ಕ್ ನಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಧವನ್ ನಾಯಕತ್ವದ ಟೀಂ ಇಂಡಿಯಾಗೆ ಸೋಲಾಗಿದೆ. ನ್ಯೂಜಿಲೆಂಡ್ ವಿಕೆಟ್ ಕೀಪರ್ ಟಾಮ್ ಲಥಿಮ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಭರ್ಜರಿ ಆಟದಿಂದಾಗಿ 47.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 309 ರನ್ ಗಳಿಸಿ 7 ವಿಕೆಟ್ ಅಂತರದಿಂದ ಕಿವೀಸ್ ಗೆಲುವು ಸಾಧಿಸಿದೆ.

ಭಾರತ ನೀಡಿದ್ದ 307 ರನ್ ಗಳ ಗುರಿಯನ್ನು 3 ವಿಕೆಟ್ ಕಳೆದುಕೊಂಡು 47.1 ಓವರ್ ಗಳಲ್ಲಿ ತಲುಪಿದೆ. ಲಥಿಮ್ 19 ಫೋರ್, 5 ಸಿಕ್ಸ್ ಮೂಲಕ ಭರ್ಜರಿ ಅಜೇಯ 145 ರನ್ ಹಾಗೂ ವಿಲಿಯಮ್ಸನ್ 7 ಫೋರ್, 1 ಸಿಕ್ಸ್ ನೊಂದಿಗೆ ಅಜೇಯ 98 ರನ್ ಗಳ ಆಟದಿಂದಾಗಿ 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ಗೆದ್ದು ಕಿವೀಸ್ ಬೀಗಿತು. ಭಾರತ ಪರ ಉಮ್ರನ್ ಮಲಿಕ್ 2, ಶ್ರಾದೂಲ್ ಠಾಕೂರ್ 1 ವಿಕೆಟ್ ಪಡೆದರು.

ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಾಯಕ ಧವನ್ 75, ಶ್ರೇಯಸ್ ಅಯ್ಯರ್ 80, ಶುಭನಂ ಗಿಲ್ 50, ಸಂಜು ಸ್ಯಾಮ್ಸನ್ 36, ವಾಸಿಂಗ್ಟನ್ ಸುಂದರ್ 37 ರನ್ ಗಳಿಂದಾಗಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿತು. ಕಿವೀಸ್ ಪರ ಸೌಥಿ ಹಾಗೂ ಫಾರ್ಗುಸನ್ ತಲಾ 3 ವಿಕೆಟ್ ಪಡೆದು ಮಿಂಚಿದರು.




Leave a Reply

Your email address will not be published. Required fields are marked *

error: Content is protected !!