ಈ ವರ್ಷ ‘ರಾಬರ್ಟ್’ ದರ್ಶನ ಆಗುತ್ತಾ?

794

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಬಹುನಿರೀಕ್ಷಿತ ಚಿತ್ರ ರಾಬರ್ಟ್ ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಬಹುಕೋಟಿ ವೆಚ್ವದಲ್ಲಿ ರೆಡಿಯಾಗಿರುವ ಸಿನಿಮಾ ಏಪ್ರಿಲ್ 9ಕ್ಕೆ ರಿಲೀಸ್ ಆಗಬೇಕಿತ್ತು. ಆದ್ರೆ, ಕರೋನಾ ಲಾಕ್ ಡೌನ್ ಚಿತ್ರರಂಗದ ಮೇಲೆ ಬರೆ ಎಳೆದಿದೆ.

ಪೋಸ್ಟರ್, ಟೀಸರ್, ಮೋಷನ್ ಸಾಂಗ್ಸ್, ಲಿರಿಕಲ್ ವಿಡಿಯೋ ಮೂಲಕ ರಾಬರ್ಟ್ ಚಿತ್ರ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದೆ. ಡಿ ಬಾಸ್ ಫ್ಯಾನ್ಸ್ ಸಿನಿಮಾ ಯಾವಾಗ ರಿಲೀಸ್ ಅಂತಿದ್ದಾರೆ. ಆದ್ರೆ ಜೂನ್ ಕಳೆಯುತ್ತಿದ್ರೂ ಸಿನಿಮಾ ಬಿಡುಗಡೆಯಾಗ್ತಿಲ್ಲ. ಯಾಕಂದ್ರೆ, ಶೂಟಿಂಗ್ ಗೆ ಒಂದಿಷ್ಟು ಷರತ್ತು ನೀಡಿ ಗ್ರೀನ್ ಸಿಗ್ನಲ್ ಕೊಟ್ಟಿರುವ ಸರ್ಕಾರ, ಥಿಯೇಟರ್ ಪ್ರಾರಂಭಕ್ಕೆ ಇನ್ನು ಅವಕಾಶ ನೀಡಿಲ್ಲ.

ಇದರ ನಡುವೆ ಸರ್ಕಾರವೇನಾದ್ರು ಥಿಯೇಟರ್ ಪ್ರಾರಂಭಕ್ಕೆ ಅವಕಾಶ ನೀಡಿದ್ರೆ, ಸಧ್ಯದ ಪರಿಸ್ಥಿತಿಯಲ್ಲಿ ಪ್ರೇಕ್ಷಕರು ಬರ್ತಾರಾ ಅನ್ನೋ ಪ್ರಶ್ನೆ ಮೂಡಿದೆ. ಯಾಕಂದ್ರೆ, ದರ್ಶನ ಸಿನಿಮಾಗಳಂದ್ರೆ ದೊಡ್ಡ ಜಾತ್ರೆಯೇ ನಡೆಯುತ್ತೆ. ಅವರ ಫ್ಯಾನ್ಸ್ ಧೂಳೆಬ್ಬಿಸಿ ಬಿಡ್ತಾರೆ. ಬೆಂಬಿಡದೆ ಕಾಡ್ತಿರುವ ಕರೋನಾ ಟೈಂನಲ್ಲಿ ಇದೆಲ್ಲ ಸಾಧ್ಯವೇ? ಗೊತ್ತಿಲ್ಲ. ಆದ್ರೆ, ಡಿ ಬಾಸ್ ಫ್ಯಾನ್ಸ್ ಮಾತ್ರ ರಾಬರ್ಟ್ ದರ್ಶನಕ್ಕೆ ಕಾಯುತ್ತಿದ್ದಾರೆ. ಹೀಗಾಗಿ ಈ ವರ್ಷ ರಾಬರ್ಟ್ ದರ್ಶನ ಸಿಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!