ಎಲ್ಲ ಮಾದರಿ ಕ್ರಿಕೆಟ್ ಗೆ ರಾಬಿನ್ ಉತ್ತಪ್ಪ ಗುಡ್ ಬೈ

171

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬೆಂಗಳೂರು: ಇಂಡಿಯನ್ ಕ್ರಿಕೆಟ್ ಟೀಂ ಆಟಗಾರ, ಕನ್ನಡದ ಕುವರ ರಾಬಿನ್ ಉತ್ತಪ್ಪ ಎಲ್ಲ ಮಾದರಿಯ ಕ್ರಿಕೆಟ್ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರೆ. 36 ವರ್ಷ ಉತ್ತಪ್ಪ ಟ್ವೀಟ್ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಕಳೆದ 20 ವರ್ಷಗಳಿಂದ ಕ್ರಿಕೆಟ್ ಅಂಗಳದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಭಾರತವನ್ನು, ಕರ್ನಾಟಕವನ್ನು ಪ್ರತಿನಿಧಿಸಿದ ಹೆಮ್ಮೆ ಇದೆ. ನನಗೆ ಎಲ್ಲ ರೀತಿಯ ಸಹಕಾರ ನೀಡಿದ ಬಿಸಿಸಿಐ, ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಸೇರಿದಂತೆ ತಂಡದ ಸದಸ್ಯರು, ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ನನ್ನ ಕುಟುಂಬದ ಜೊತೆಗೆ ಸಮಯವನ್ನು ಕಳೆಯುತ್ತೇನೆ ಎಂದಿದ್ದಾರೆ.

ಏಪ್ರಿಲ್ 15, 2006ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಏಕದಿನಕ್ಕೆ ಎಂಟ್ರಿ ಕೊಟ್ಟ ಉತ್ತಪ್ಪ, 46 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 934 ರನ್ ಗಳಿವೆ. 6 ಅರ್ಧಶತಕಗಳಿವೆ. 86 ಗರಿಷ್ಠ ಸ್ಕೋರ್ ಆಗಿದೆ. ಜಿಂಬಾಬ್ವೆ ವಿರುದ್ಧ ಜುಲೈ 14, 2015ರಲ್ಲಿ ಆಡಿದ ಪಂದ್ಯವೇ ಕೊನೆಯದು.

ಇನ್ನು 12 ಟಿ-20 ಪಂದ್ಯಗಳಿಂದ 249 ರನ್ ಗಳಿಸಿದ್ದಾರೆ. ಜಿಂಬಾಬ್ವೆ ವಿರುದ್ಧ ಜುಲೈ 19, 2015ರಲ್ಲಿ ಆಡಿದ್ದು ಕೊನೆಯ ಟಿ-20 ಪಂದ್ಯವಾಗಿದೆ. ಟೆಸ್ಟ್ ನಲ್ಲಿ ಆಡಲು ರಾಬಿನ್ ಉತ್ತಪ್ಪಗೆ ಅವಕಾಶ ಸಿಗಲಿಲ್ಲ. ಇನ್ನು ಐಪಿಎಲ್ ನಲ್ಲಿ ಆರ್ ಸಿಬಿ, ಮುಂಬೈ, ರಾಜಸ್ಥಾನ್ ರಾಯಲ್ಸ್, ಕೆಕೆಆರ್, ಸಿಎಸ್ಕೆ ತಂಡದಲ್ಲಿ ಆಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!