ಇಟಲಿಯಲ್ಲಿ ಸದ್ದು ಮಾಡಿದ ‘ರುದ್ರಿ’ಗೆ ಪ್ರಶಸ್ತಿ ಗರಿ

311

ಸ್ಯಾಂಡಲ್ ವುಡ್ ಚಿತ್ರವೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಇಟಲಿಯಲ್ಲಿ ನಡೆದ ಓನಿರೋಸ್ ಚಿತ್ರೋತ್ಸವದಲ್ಲಿ ಕನ್ನಡದ ರುದ್ರಿ ಚಿತ್ರ ಭರ್ಜರಿ ಸದ್ದು ಮಾಡಿದೆ. ಅಲ್ದೇ, ಎರಡು ಪ್ರಶಸ್ತಿಗಳನ್ನ ಬಾಚಿಕೊಂಡಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಗೌರವ ತಂದಿದೆ.

ನಿರ್ದೇಶಕ ಬಡೀಗೇರ ದೇವೇಂದ್ರ ನಿರ್ದೇಶನದ ರುದ್ರಿ ಚಿತ್ರದ ನಟಿ ಪಾವನಾಗೌಡಗೆ ಅತ್ಯುತ್ತಮ ನಟಿ ಹಾಗೂ ಕ್ರಿಯಾಶೀಲ ಪೋಸ್ಟರ್ ಗೆ ಬೆಸ್ಟ್ ಪೋಸ್ಟರ್ ಅವಾರ್ಡ್ ಬಂದಿವೆ. ಈ ಮೂಲಕ ರುದ್ರಿ ಎರಡು ಪ್ರಶಸ್ತಿಗಳನ್ನ ಬಾಚಿಕೊಂಡಿದ್ದಾಳೆ.

ಅನ್ಯಾಯವಾದಗ ಹೆಣ್ಣು ಅದನ್ನ ವಿರೋಧಿಸಿ, ಅಗತ್ಯಬಿದ್ದರೆ ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಕಥಾಹಂದರವನ್ನ ಹೊಂದಿದೆ. ನಟಿ ಪಾವನಾಗೌಡ ಸೇರಿದಂತೆ ರಂಗಭೂಮಿಯ ಅನೇಕ ಕಲಾವಿದರು ನಟಿಸಿದ್ದಾರೆ. ಸಾಧುಕೋಕಿಲಾ ಸಂಗೀತ ನೀಡಿದ್ದಾರೆ. ಸಿ.ಆರ್ ಮಂಜುನಾಥ ನಿರ್ಮಾಣ ಮಾಡಿದ್ದಾರೆ. ಆದಷ್ಟು ಬೇಗ ಈ ಚಿತ್ರ ರಿಲೀಸ್ ಆಗಲಿದೆ ಎಂದು ಚಿತ್ರ ತಂಡ ತಿಳಿಸಿದೆ.




Leave a Reply

Your email address will not be published. Required fields are marked *

error: Content is protected !!