ಸಲಗ ಎಂಟ್ರಿಗೆ ಫಿಕ್ಸ್ ಆಯ್ತು ಡೇಟ್

510

ನಟ ದುನಿಯಾ ವಿಜಿ ಅಭಿನಯದ ಜೊತೆಗೆ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಲಗ ಮೂವಿ ಈಗಾಗ್ಲೇ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿದೆ. ಟೀಸರ್, ಟ್ರೇಲರ್ ಮೂಲಕ ದುನಿಯಾ ವಿಜಿ ಫ್ಯಾನ್ಸ್ ಗೆ ಭರ್ಜರಿ ಕಿಕ್ ಕೊಡಲಾಗಿದೆ. ಹೀಗಾಗಿ ಅವರ ಅಭಿಮಾನಿಗಳು ಸಿನಿಮಾ ಯಾವಾಗ ರಿಲೀಸ್ ಅಂತಾ ಕಾಯುತ್ತಿದ್ದಾರೆ.

ಸಲಗ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಮಾರ್ಚ್ 27ಕ್ಕೆ ತೆರೆಗೆ ಅಪ್ಪಳಿಸ್ತಾನಂತೆ. ಯುಗಾದಿ ಹಬ್ಬದಲ್ಲಿ ಸಲಗನ ಹಾವಳಿ ಜೋರಾಗಿರುತ್ತೆ ಅಂತಾ ಹೇಳಲಾಗ್ತಿದೆ. ಪಕ್ಕಾ ಮಾಸ್ ಮೂವಿಯಲ್ಲಿ ದುನಿಯಾ ವಿಜಿ ಹಾಗೂ ಡಾಲಿ ಧನಂಜಯ ಪೈಪೋಟಿ ಜೋರಾಗಿರುತ್ತೆ.

ನಟ ಧನಂಜಯ ಸಲಗ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾನೆ. ವಿಜಿಗೆ ಸಂಜನಾ ಆನಂದ ಜೋಡಿಯಾಗಿ ಕಾಣಿಸಿಕೊಂಡಿದ್ದಾಳೆ. ಕೆ.ಪಿ ಶ್ರೀಕಾಂತ ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಈಗಾಗ್ಲೇ ಟಗರು ಸಕ್ಸಸ್ ನೀಡಿರುವ ಖುಷಿಯಲ್ಲಿರುವ ನಿರ್ಮಾಪಕರಿಗೆ ಸಲಗದ ಮೇಲೆಯೂ ನಿರೀಕ್ಷೆಯನ್ನ ಇಟ್ಟುಕೊಂಡಿದ್ದಾರೆ. ಒಟ್ನಲ್ಲಿ ಸಲಗದ ಅಬ್ಬರ ನೋಡಲು ಇನ್ನೊಂದು ತಿಂಗಳು ಕಾಯಬೇಕು.




Leave a Reply

Your email address will not be published. Required fields are marked *

error: Content is protected !!