ಏನಿದು ಸಮುದ್ರಂ ಚಿತ್ರದ ವಿವಾದ?

228

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಶಿವಧ್ವಜ ಹಾಗೂ ನಟಿ ಅನಿತಾ ಭಟ್ ನಟನೆಯ ಸಮುದ್ರಂ ಚಿತ್ರದ ಸಿನಿಮಾಟೋಗ್ರಾಫರ್ ರಿಶಿಕೇಷ್ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಹೇಳಲಾಗುತ್ತಿದೆ. ಚಿತ್ರಕ್ಕೆ ಸಂಬಂಧಿಸಿದ ಹಾರ್ಡ್ ಡಿಸ್ಕ್ ತೆಗೆದುಕೊಂಡು ಪರಾರಿಯಾಗಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

ರಾಜಲಕ್ಷ್ಮಿ ಸಿನಿ ಕ್ರಿಯೇಷನ್, ಅನಿತಾ ಭಟ್ ಕ್ರಿಯೇಷನ್ ಹಾಗೂ ಡಾಟಾ ಟಾಕೀಸ್ ಸಹಯೋಗದಲ್ಲಿ ಸಮುದ್ರಂ ಸಿನಿಮಾ ನಿರ್ಮಾಣ ಮಾಡಲಾಗಿದೆಯಂತೆ. ಸಿನಿಮಾದ ಡಬ್ಬಿಂಗ್, ಮ್ಯೂಸಿಕ್, ರೀ ರೆಕಾರ್ಡಿಂಗ್, ಎಡಿಟಿಂಗ್, ಡಿಜೆ ಜವಾಬ್ದಾರಿ ತೆಗೆದುಕೊಂಡಿರುವ ರಿಶಿಕೇಷ್ ಇದಕ್ಕಾಗಿ 19 ಲಕ್ಷ ರೂಪಾಯಿ ಪಡೆದಿದ್ದು, ಇದೀಗ ಚಿತ್ರದ ಹಾರ್ಡ್ ಡಿಸ್ಕ್ ಕೊಡದೆ ಎಸ್ಕೇಪ್ ಆಗಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ನಟಿ ಹಾಗೂ ನಿರ್ಮಾಣದ ಭಾಗವಾಗಿರುವ ಅನಿತಾ ಭಟ್, ಇದರಲ್ಲಿ ರಿಶಿಕೇಷ್ ತಪ್ಪು ಏನಿಲ್ಲ. ಈ ಸಿನಿಮಾ ಮೊದಲು ಆರಂಭಿಸಿದ್ದು ನಾನು. ಹಣಕಾಸಿನ ಸಮಸ್ಯೆಯಾದಾಗ ನಿರ್ದೇಶಕ ರಾಘವ್ ಮಹರ್ಷಿ ಅವರು ರಾಜಲಕ್ಷ್ಮಿ ಅವರನ್ನು ಕರೆದುಕೊಂಡು ಬಂದರು. ಎಲ್ಲರೂ ಒಟ್ಟಿಗೆ ಕೆಲಸ ಮಾಡಿದೇವು. ಮುಂದೆ ಅವರು ಪೂರ್ತಿ ಸಿನಿಮಾ ನಾವೇ ನಿರ್ಮಾಣ ಮಾಡ್ತೀವಿ ಎಂದರು. ಅದಕ್ಕೆ ಒಪ್ಪಿ ಇದುವರೆಗೂ ಖರ್ಚು ಮಾಡಿರುವ ಹಣ ಕೊಡಿ ಎಂದೆವು. ಅದಕ್ಕೆ ಓಕೆ ಎಂದವರು ಇದುವರೆಗೂ ಹಣ ಕೊಟ್ಟಿಲ್ಲ. ರಿಶಿಕೇಷ್ ಗೆ, ಟೆಕ್ನಿಷನ್ ಗೆ ಹಣ ಕೊಡಬೇಕು. ಅವರ ವಿರುದ್ಧ ನಾವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ಕೊಟ್ಟಿದ್ದೇವೆ ಅಂತಿದ್ದಾರೆ.

ದೂರು, ಪ್ರತಿದೂರು ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಈ ಹಿಂದೆಯೂ ದೂರು ಸಲ್ಲಿಸಲಾಗಿದೆ. ಆದರೆ, ಸಮಸ್ಯೆ ಮಾತ್ರ ಮುಗಿದಿಲ್ಲವಂತೆ. ಹೀಗಾಗಿ ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!