ಧಾರವಾಡದಲ್ಲಿ 800 ಕೆಜಿ ಶ್ರೀಗಂಧ ವಶ

288

ಪ್ರಜಾಸ್ತ್ರ ಸುದ್ದಿ

ಧಾರವಾಡ: ಕೋವಿಡ್ 19 ಲಾಕ್ ಡೌನ್ ಸಮಯವನ್ನ ಬಂಡವಾಳ ಮಾಡಿಕೊಂಡ ಶ್ರೀಗಂಧ ಹಾಗೂ ಸುಗುವಾನಿ ಕಳ್ಳರು ಬರೊಬ್ಬರಿ 800 ಕೆಜಿ ಶ್ರೀಗಂಧ ಹಾಗೂ 360 ಘನಪೂಟ್ ಸಾಗುವಾನಿ ಮರದ ತುಂಡನ್ನ ಕಳ್ಳತನ ಮಾಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಇದೆಲ್ಲವನ್ನ ವಶಕ್ಕೆ ಪಡೆದಿದ್ದಾರೆ.

ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿ ತಂಡ ಕೇವಲ 8 ತಿಂಗಳಲ್ಲಿ ಅಂದಾಜು ಒಂದು ಕೋಟಿಗೂ ಹೆಚ್ಚು ಮೌಲ್ಯದ ಶ್ರೀಗಂಧ ಹಾಗೂ ಅಂದಾಜು 20 ಲಕ್ಷ ಮೌಲ್ಯದ ತುಂಡುಗಳನ್ನ ವಶಕ್ಕೆ ಪಡೆಯಲಾಗಿದೆ. ಕಳ್ಳರ ಬಂಧನಕ್ಕೆ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ವಿಶೇಷ ತಂಡ ರಚಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ. ಈ ಸಂಬಂಧ ಮೂವರನ್ನ ಬಂಧಿಸಲಾಗಿದೆ.

ಜಿಲ್ಲೆಯ ಕಲಘಟಗಿ ತಾಲೂಕಿನ ಶಿಗಿಘಟ್ಟಿ ಗ್ರಾಮದ ಹೊರ ವಲಯದಲ್ಲಿ ಅಕ್ರಮವಾಗಿ ಶ್ರೀಗಂಧ ಕಡಿದು ಮಾರಾಟಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.

ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ತೋಟದ ಮನೆಯಿಂದ ಆಂಧ್ರಪ್ರದೇಶಕ್ಕೆ ಶ್ರೀಗಂಧ ಮಾರಾಟಕ್ಕೆ ಯತ್ನ ನಡೆಸುತ್ತಿದ್ದ, ಕಿಂಗ್‌ ಪಿನ್ ಪರಪ್ಪ ಭಜಂತ್ರಿಯನ್ನು ಖೆಡ್ಡಾಗೆ ಕಡೆವಿರುವ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು, 40 ಕೆಜಿಯಷ್ಟು ಶ್ರೀಗಂಧ ವಶಕ್ಕೆ ಪಡೆದಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ನುಗ್ಗಿಕೇರಿಯ ಹೊರವಲಯದಲ್ಲಿ 250 ಕೆಜಿ ಶ್ರೀಗಂಧ ಮಾರಾಟಕ್ಕೆ ಯತ್ನಿಸಿದ್ದ ಕಿಂಗ್‌ ಪಿನ್ ಗುರುಮೂರ್ತಿಯನ್ನು ಬಂಧಿಸುವ ಮೂಲಕ ಶ್ರೀಗಂಧ ವಶಕ್ಕೆ ಪಡೆಯಲಾಗಿದೆ. ಇಲ್ಲಿಯವರೆಗೂ ಧಾರವಾಡ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಗುರುಮೂರ್ತಿ, ಪರಸಪ್ಪ ಶಗಿಗಟ್ಟಿ‌‌‌ ಸೇರಿದಂತೆ 22ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, 15ಕ್ಕೂ ಹೆಚ್ಚು ಸರಕು ಸಾಗಣೆ  ವಾಹನ ವಶಕ್ಕೆ ಪಡೆಯಲಾಗಿದೆ.




Leave a Reply

Your email address will not be published. Required fields are marked *

error: Content is protected !!