ವಿಯೆಟ್ನಾಂನಲ್ಲಿ ಚಂಪಾ ಅರಸರ ಕಾಲದ ಶಿವಲಿಂಗ ಪತ್ತೆ

357

ಪ್ರಜಾಸ್ತ್ರ ಸುದ್ದಿ

ವಿಯೆಟ್ನಾಂನಲ್ಲಿ 9ನೇ ಶತಮಾನದ ಶಿವಲಿಂಗಗಳು ಪತ್ತೆಯಾಗಿವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ ತಿಳಿಸಿದ್ದಾರೆ. ಭಾರತ ಪುರಾತತ್ವ ಇಲಾಖೆ ಅಧಿಕಾರಿಗಳು ಮೈಸನ್ ಪ್ರದೇಶದಲ್ಲಿ ಉತ್ಖನನ ನಡೆಸುವಾಗ ವಿಶಿಷ್ಟ ಶಿವಲಿಂಗಗಳು ಪತ್ತೆಯಾಗಿವೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಈ ಭಾಗದಲ್ಲಿ ಚಂಪಾ ಅರಸರಿಂದ 70ಕ್ಕೂ ಹೆಚ್ಚು ದೇವಾಲಯಗಳನ್ನ ನಿರ್ಮಿಸಲಾಗಿತ್ತು. ವಿಯೆಟ್ನಾಂ ಯುದ್ಧದ ವೇಳೆ ಅಮೆರಿಕ ಬಾಂಬ್ ದಾಳಿಯಿಂದ ದೇವಸ್ಥಾನಗಳು ನಾಶವಾಗಿವೆ. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಈ ಪ್ರದೇಶವನ್ನ 4ನೇ ಶತಮಾನದಿಂದ 14ನೇ ಶತಮಾನದವರೆಗೂ ಚಂಪಾ ಅರಸರು ಆಳಿದ್ದರು ಎಂದು ಹೇಳಲಾಗ್ತಿದೆ.

https://twitter.com/DrSJaishankar/status/1265520811546488833?s=20

ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಉತ್ಖನನ ನಡೆಸ್ತಿದ್ದಾರೆ. 6 ಶಿವಲಿಂಗಗಳು ಪತ್ತೆಯಾಗಿದ್ದು, ಇವುಗಳನ್ನ ಸಂರಕ್ಷಿಸಿ ಇಡಲು ಭಾರತ ಹಾಗೂ ವಿಯೆಟ್ನಾಂ ಮುಂದಾಗಿದ್ದು, ಇದಕ್ಕಾಗಿ ವಿದೇಶಾಂಗ ಸಚಿವಾಲಯ ಡಿಪಿಎ 4 ಅನ್ನೋ ವಿಭಾಗ ರೆಡಿ ಮಾಡಿದೆ ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!