ಬ್ರಿಟಿಷರ ವಿರುದ್ಧ ಹೋರಾಡಿದ್ದ ಇಂಚಗೇರಿ ಶ್ರೀಗಳ ಜಾತ್ರೆ ರದ್ದು

311

ಪ್ರಜಾಸ್ತ್ರ ಸುದ್ದಿ

ಚಡಚಣ: ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಇಂಚಗೇರಿ ಮಠದ ಜಾತ್ರೆ ರದ್ದು ಮಾಡಲಾಗಿದೆ. ಮಹಾಮಾರಿ ಕರೋನಾದಿಂದಾಗಿ ಮೇ 31ರಿಂದ ಜೂನ್ 2ರ ವರೆಗೆ 3 ದಿನಗಳ ಕಾಲ ನಡೆಯಬೇಕಿದ್ದ ಜಾತ್ರೆಯನ್ನ ರದ್ದು ಮಾಡಲಾಗಿದೆ.

ಮಾಧವನಾಂದ ಶ್ರೀಗಳ ಪುಣ್ಯಸ್ಮರಣೆ ನಿಮಿತ್ತ ಪ್ರತಿವರ್ಷ ಜಾತ್ರೆ ನಡೆಯುತ್ತೆ. ಜಾತ್ರೆಗೆ ಮಹಾರಾಷ್ಟ್ರ ಕರ್ನಾಟಕ ಸೇರಿ 1 ಲಕ್ಷಕ್ಕೂ ಹೆಚ್ಚು ಜನರು ಸೇರುತ್ತಿದ್ದರು. ಆದ್ರೆ, ಮಹಾರಾಷ್ಟ್ರದಲ್ಲಿಯೇ ಕರೋನಾ ರಣಕೇಕೆ ಹಾಕ್ತಿದೆ. ಅಲ್ಲಿನ ನಂಜು ಕರ್ನಾಟಕಕ್ಕೂ ತಟ್ಟಿದೆ. ಹೀಗಾಗಿ ಈ ಬಾರಿಯ ಜಾತ್ರೆಯನ್ನ ರದ್ದು ಮಾಡಲಾಗಿದೆ. ಭಕ್ತರು ಮನೆಯಲ್ಲಿಯೇ ಪೂಜೆ, ಭಜನೆ ಮಾಡಬೇಕೆಂದು ಮಠದ ಪೀಠಾಧಿಕಾರಿಗಳಾದ ರೇವಣಸಿದ್ಧೇಶ್ವರ ಶ್ರೀಗಳು ತಿಳಿಸಿದ್ದಾರೆ.

ಬ್ರಿಟಿಷರ್ ವಿರುದ್ಧ ಹೋರಾಡಿದ್ದ ಶ್ರೀಗಳು

ಇಂಚಗೇರಿ ಮಠ ಜಾತ್ಯಾತೀತವಾಗಿದೆ. ಇಲ್ಲಿಗೆ ಎಲ್ಲ ಜಾತಿ, ಧರ್ಮದ ಭಕ್ತರು ಬರ್ತಾರೆ. ಈ ಮಠದ ಮಾಧವನಾಂದ ಶ್ರೀಗಳು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಬ್ರಿಟಿಷರ್ ವಿರುದ್ಧ ತೊಡೆ ತಟ್ಟಿದ್ರು. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ರು. ಅವರನ್ನ ಹೋರಾಟದಲ್ಲಿ ಭಾಗವಹಿಸುವಂತೆ ಪ್ರೇರಿಪಿಸಿದ್ರು. ಹೀಗಾಗಿ ಪ್ರತಿವರ್ಷ ನಡೆಯುವ ಶ್ರೀಗಳ ಪುಣ್ಯ ಸ್ಮರಣೆಯನ್ನ ಸ್ವಾತಂತ್ರ್ಯ ಹೋರಾಟಗಾರನ ಜಾತ್ರೆ ಎಂದೇ ಈ ಭಾಗದ ಜನರು ಕರೆಯುತ್ತಾರೆ. ಅಷ್ಟರ ಮಟ್ಟಿಗೆ ಇಂಚಗೇರಿ ಜಾತ್ರೆ ಪ್ರಸಿದ್ಧಿ ಪಡೆದಿದೆ.

ಜನರಲ್ಲಿ ಜಾಗೃತಿ ಮೂಡಿಸ್ತಿರುವ ಮಾಧವನಾಂದ ಪ್ರಭೂಜಿ

ಈ ಬಾರಿ ಕರೋನಾ ಲಾಕ್ ಡೌನ್ ನಿಂದಾಗಿ, ಸರ್ಕಾರದ ಆದೇಶಗಳನ್ನ ಪಾಲಿಸಬೇಕೆಂದು ಪೀಠಾಧಿಕಾರಿಗಳು ಹೇಳಿದ್ದಾರೆ. ಆದ್ದರಿಂದ ಭಕ್ತರು ಮನೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ.

ಭಾಷಣದ ಮೂಲಕ ಜನರಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ನೀಡ್ತಿರುವುದು



Leave a Reply

Your email address will not be published. Required fields are marked *

error: Content is protected !!