ಡೊನೇಷನ್ ತೆಗೆದುಕೊಳ್ಳುವಂತಿಲ್ಲ.. ಪೂರ್ತಿ ಫೀಸ್ ಕೊಡುವಂತಿಲ್ಲ..

372

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಈಗಾಗ್ಲೇ ಶಾಲಾ, ಕಾಲೇಜುಗಳು ಒಂದು ಹಂತದಲ್ಲಿ ಶುರುವಾಗಿವೆ. ಅಲ್ದೇ, ಎಸ್ಎಸ್ಎಲ್ ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಸಹ ಬಿಡಲಾಗಿದೆ. ಇದರ ನಡುವೆ ಪೋಷಕರು ಹಾಗೂ ಶೈಕ್ಷಣಿಕ ಸಂಸ್ಥೆಗಳ ನಡುವೆ ಇರುವ ಗೊಂದಲ ಫೀಸ್ ಬಗ್ಗೆ. ಇದನ್ನ ಶಿಕ್ಷಣ ಸಚಿವರು ಬಗೆಹರಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಶಾಲೆ ಪ್ರರಂಭಿಸಿರುವ ಸಂಸ್ಥೆಗಳು ಡೊನೇಷನ್ ಪಡೆಯುವಂತಿಲ್ಲ. ಇದರ ಜೊತೆಗೆ ಪೂರ್ತಿ ಶುಲ್ಕ ಸಹ ಪಡೆಯುವಂತಿಲ್ಲ. ಶೇಕಡ 70ರಷ್ಟು ಶುಲ್ಕ ಮಾತ್ರ ಪಡೆಯಬೇಕೆಂದು ಶಿಕ್ಷಣ ಸಚಿವ ಸುರೇಶಕುಮಾರ ಹೇಳಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದಿದ್ದಾರೆ.

ಬೋಧನಾ ಶುಲ್ಕದಲ್ಲಿಯೇ ಪರೀಕ್ಷಾ ಶುಲ್ಕ, ಶಿಕ್ಷಕ, ಶಿಕ್ಷಕೇತರ ವೇತನ, ಗ್ರಂಥಾಲಯ, ಲ್ಯಾಬ್ ಹಾಗೂ ಕ್ರೀಡಾ ಶುಲ್ಕ ಇರುತ್ತದೆ. ಇದರ ಹೊರತು ಪಡಿಸಿ ಇನ್ಯಾವುದೇ ರೀತಿಯ ದೇಣಿಗೆ, ಅಭಿವೃದ್ಧಿ ಸೇರಿದಂತೆ ಇತರೆ ಹೆಸರಿನ ಶುಲ್ಕ ಪಡೆಯುವಂತಿಲ್ಲ. ಒಂದು ವೇಳೆ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರ ನಡುವೆ ತಕರಾರು ಇದ್ದರೆ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಮಿತಿ ರಚಿಸಲಿದ್ದು ಅಲ್ಲಿಗೆ ದೂರು ನೀಡಬಹುದು ಎಂದು ಸಚಿವರು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!