ರಂಜಾನ್ ಆಚರಣೆ: ಶಾಲೆಗಳ ಸಮಯ ಬದಲಾಯಿಸಿದ ಸರ್ಕಾರ

157

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಂಜಾನ್ ಹಬ್ಬದ ಆಚರಣೆಗಾಗಿ ಉರ್ದು ಶಾಲೆಗಳ ಸಮಯವನ್ನು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 1 ತಿಂಗಳ ಕಾಲ ಸಮಯ ಬದಲಾವಣೆ ಮಾಡಲಾಗಿದೆ.

ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಶುಕ್ರವಾರ ಆದೇಶ ಹೊರಡಿಸಿದ್ದು, ಮುಂಜಾನೆ 8 ಗಂಟೆಯಿಂದ ಮಧ್ಯಾಹ್ನ 12.45ರ ತನಕ ಸಮಯ ನಿಗದಿ ಮಾಡಲಾಗಿದೆ. ಸರ್ಕಾರಿ ಅನುದಾನ, ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಸಂಜೆ ಅರ್ಧ ಗಂಟೆ ಬೇಗ ತೆರಳು ವಿದ್ಯಾರ್ಥಿಗಳು, ಸಿಬ್ಬಂದಿಗೆ ಅನುಮತಿ ನೀಡಲಾಗಿದೆ.

ರಂಜಾನ್ ತಿಂಗಳಲ್ಲಿ ಉರ್ದು ಶಾಲೆಯ ಸಮಯ ಬದಲಾವಣೆಗೆ ಕೆಲ ಮುಸ್ಲಿಂ ಶಾಸಕರು ಮನವಿ ಮಾಡಿದ್ದರು. ಈ ವಿಚಾರ ಮತ್ತೊಂದು ಸ್ವರೂಪ ಪಡೆದುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾ ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!