ಸಿಂದಗಿ ಉಪ ಚುನಾವಣೆ: ಅಂತಿಮವಾಗಿ ಕಣದಲ್ಲಿ 6 ಅಭ್ಯರ್ಥಿಗಳು..

299

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯ ಸಿಂದಗಿ ಉಪ ಚುನಾವಣೆಯಲ್ಲಿ ಅಂತಿಮವಾಗಿ ಕಣದಲ್ಲಿ ಆರು ಅಭ್ಯರ್ಥಿಗಳು ಉಳಿದಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಒಟ್ಟು 8 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ರಾಷ್ಟ್ರೀಯ ಸಮಾಜ ಪಕ್ಷದ ವಿಕ್ರಮ ಪಂಡಿತ ಹಾಗೂ ಪಕ್ಷೇತರ ಅಭ್ಯರ್ಥಿ ಅಬ್ದುಲ್ ರೆಹಮಾನ್ ದುಂಡಸಿ ನಾಮಪತ್ರ ವಾಪಸ್ ಪಡೆದಿದ್ದಾರೆ.

ಕಾಂಗ್ರೆಸ್ ನಿಂದ ಅಶೋಕ ಮನಗೂಳಿ, ಜೆಡಿಎಸ್ ನಿಂದ ನಾಜಿಯಾ ಅಂಗಡಿ, ಬಿಜೆಪಿಯಿಂದ ರಮೇಶ ಭೂಸನೂರ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಡಾ.ಸುನೀಲಕುಮಾರ ಹೆಬ್ಬಿ, ಪಕ್ಷೇತರ ಅಭ್ಯರ್ಥಿಗಳಾಗಿ ಜೀಲಾನಿ ಮುಲ್ಲಾ ಹಾಗೂ ದೀಪಿಕಾ.ಎಸ್ ಕಣದಲ್ಲಿ ಉಳಿದಿದ್ದಾರೆ.




Leave a Reply

Your email address will not be published. Required fields are marked *

error: Content is protected !!