ಸಿಂದಗಿಯಲ್ಲಿ ಅಚ್ಚರಿ ಮೂಡಿಸಿದ ಈ ಅಭ್ಯರ್ಥಿಯ ಮತಗಳು..!

317

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ವಿಧಾನಸಭೆ ಉಪ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಭರ್ಜರಿ ಗೆಲವು ಸಾಧಿಸಿದ್ದಾರೆ. ಕಾಂಗ್ರೆಸ್ 2ನೇ ಸ್ಥಾನಕ್ಕೆ ಜೆಡಿಎಸ್ 3ನೇ ಸ್ಥಾನಕ್ಕೆ ಬಂದಿದೆ. ಈ ಫಲಿತಾಂಶ ಹಲವರಿಗೆ ಹಲವು ಪಾಠಗಳನ್ನು ಕಲಿಸಿದೆ.

ಇದೆಲ್ಲದರ ನಡುವೆ ಅಚ್ಚರಿ ಮೂಡಿಸಿದ್ದು ಪಕ್ಷೇತರ ಅಭ್ಯರ್ಥಿಯೊಬ್ಬರಿಗೆ ಈ ಪ್ರಮಾಣದಲ್ಲಿ ಮತಗಳು ಬಂದಿರುವುದು. ಅದು ಬೆಂಗಳೂರು ಮೂಲದ ಅಭ್ಯರ್ಥಿ ಸಿಂದಗಿಗೆ ನಾಮಪತ್ರ ಸಲ್ಲಿಸಿ ಹೋಗಿದ್ದೇ ಬಹುತೇಕರಿಗೆ ಗೊತ್ತಿಲ್ಲ. ಅವರ ಮುಖವನ್ನು ಇದುವರೆಗೆ ಎಷ್ಟು ಜನ ನೋಡಿದ್ದಾರೋ ಗೊತ್ತಿಲ್ಲ. ಅಂತಹ ಅಭ್ಯರ್ಥಿಗೆ ಬಂದಿರುವ ಮತಗಳು ನೋಡಿದರೆ ಇನ್ನೂ ಅಚ್ಚರಿಯಾಗುತ್ತೆ.

ಬೆಂಗಳೂರು ಮೂಲದ ದೀಪಿಕಾ.ಎಸ್ ಎಂಬುವರು ಸಿಂದಗಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮತಕ್ಷೇತ್ರದ ಜನರಿಗೆ ಹೊಸಬರು. ಕ್ಷೇತ್ರದಲ್ಲಿ ಎಲ್ಲೆಲ್ಲಿ ಪ್ರಚಾರ ಮಾಡಿದ್ದಾರೆ ಅನ್ನೋದೇ ಬಹುತೇಕರಿಗೆ ತಿಳಿದಿಲ್ಲ. ಇಂತಹ ಅಭ್ಯರ್ಥಿಗೆ 415 ಮತಗಳು ಬಂದಿವೆ. ಅಂಚೆ ಮೂಲಕ 06 ಮತಗಳು ಹಾಗೂ ಇವಿಎಂ ಮೂಲಕ 409 ಮತಗಳು ಸೇರಿ 415 ಮತಗಳನ್ನು ಪಡೆದಿದ್ದಾರೆ.

ಇನ್ನೊಬ್ಬರು ಪಕ್ಷೇತರ ಅಭ್ಯರ್ಥಿ ಜಿಲಾನಿ ಗುಡುಸಾಬ್ ಮುಲ್ಲಾ 513 ಮತಗಳನ್ನು ಪಡೆದಿದ್ದಾರೆ. ಇವರು ಸಿಂದಗಿಯವರಾಗಿದ್ದಾರೆ. ಕೆಆರ್ ಎಸ್ ಅಭ್ಯರ್ಥಿ ಡಾ.ಸುನೀಲಕುಮಾರ ಹಬ್ಬಿ 925 ಮತಗಳನ್ನು ಪಡೆದಿದ್ದಾರೆ. ಇವರು ವಿಜಯಪುರದವರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!